LATEST NEWS
ದಕ್ಷಿಣಕನ್ನಡದಲ್ಲಿ 24 ಮಂದಿಗೆ ಕೊರೊನಾ ಸೊಂಕು

ಮಂಗಳೂರು ಜೂನ್ 6: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 24 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇದರೊಂದಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 167ಕ್ಕೆ ಏರಿಕೆಯಾಗಿದೆ. ಇಂದು ದಾಖಲಾದ 24 ಪ್ರಕರಣಗಳಲ್ಲಿ 5 ಪ್ರಕರಣಗಳ ಕೊರೊನಾ ಸೊಂಕಿನ ಮೂಲ ಇನ್ನು ಪತ್ತೆಯಾಗಿಲ್ಲ.ಉಳಿದ ಪ್ರಕರಣಗಳಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ 11 ಜನರಿಗೆ ಕೊರೊನಾ ಸೊಂಕು ತಗುಲಿದ್ದು, ದುಬೈನಿಂದ ಆಗಮಿಸಿದ 6 , ಹಾಗೂ ಟರ್ಕಿಯಿಂದ ಬಂದ ಒಬ್ಬರಿಗೆ, ಸೌದಿ ಅರೇಬಿಯಾದಿಂದ ಬಂದ ಒಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟಿದೆ.