Connect with us

    UDUPI

    2019ರ ಒಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ – ಪೇಜಾವರ ಶ್ರೀ ಘೋಷಣೆ

    2019ರ ಒಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ – ಪೇಜಾವರ ಶ್ರೀ ಘೋಷಣೆ

    ಉಡುಪಿ ನವೆಂಬರ್ 24: 2019 ರ ಒಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಘೋಷಣೆ ಮಾಡಿದ್ದಾರೆ.

    ಉಡುಪಿಯಲ್ಲಿ ಇಂದು ನಡೆದ ಧರ್ಮಸಂಸದ್ ನ ಉದ್ಘಾಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಸ್ಪೃಶ್ಯತೆ ಹಾಗೂ ಅಸಮಾನತೆ ಹಿಂದೂ ಸಮಾಜದ ಕಾಲಕೋಟ ವಿಷ ಇದ್ದಂತೆ ಎಂದು ಹೇಳಿದ ಪೇಜಾವರ ಶ್ರೀಗಳು ಭಕ್ತಿ ಹಾಗೂ ಚಾರಿತ್ರ್ಯದ ಮೇಲೆ‌ ಶ್ರೇಷ್ಠತೆ ಗುರುತಿಸಲ್ಪಡುತ್ತದೆ, ಭಕ್ತಿ ಹಾಗೂ ಉತ್ತಮ ಚಾರಿತ್ರ್ಯ ಹೊಂದಿದ ದಲಿತ ಬ್ರಾಹ್ಮಣನಿಗಿಂತಲೂ ಶ್ರೇಷ್ಠ ಎಂದು ತಿಳಿಸಿದರು.

    ಇಂದು ಸುಬ್ರಹ್ಮಣ್ಯ ಷೃಷ್ಠಿ ಈ ಸಂದರ್ಭದಲ್ಲಿ ಷಣ್ಮುಖ‌ ಸುಬ್ರಹ್ಮಣ್ಯನಂತೆ ಹಿಂದೂ ಸಮಾಜಕ್ಕೂ ಆರು ಮುಖಗಳಿವೆ ಆದರೆ ಹೃದಯ ಒಂದೇ ಆಗಿರಬೇಕಿದೆ ಎಂದು ಹೇಳಿದರು. ಲಿಂಗಾಯಿತ, ವೀರಶೈವ ಸೇರಿದಂತೆ ಎಲ್ಲವೂ ಹಿಂದೂ ಧರ್ಮಕ್ಕೆ ಸೇರಿದವು ಎಂದು ಅವರು ಸ್ಪಷ್ಟಪಡಿಸಿದರು. ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರೆಂದು ಹಿಂದೂ ಸಮಾಜ ವಿಂಗಡನೆ ಮಾಡುತ್ತಿಲ್ಲ , ಈ ವಿಂಗಡನೆಯನ್ನು ಜಾತ್ಯಾತೀತ ರಾಜಕೀಯ ಪಾರ್ಟಿಗಳು ಮಾಡುತ್ತಿದ್ದಾರೆ ಎಂದು ಪೇಜಾವರ ಶ್ರೀಗಳು ಆರೋಪಿಸಿದರು.

    ಗೋ ಹತ್ಯೆ ನಿಷೇಧ ಕೇಂದ್ರ ಸರಕಾರದ ಕೆಲಸ ಮಾತ್ರವಲ್ಲದೆ, ಎಲ್ಲಾ ರಾಜ್ಯಗಳ ಸರಕಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯ ಇದೆ ಎಂದು ಅವರು ಹೇಳಿದರು. ಗೋ ಹತ್ಯೆ ನಿಷೇಧಿಸುವ ನಿಟ್ಟಿನಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲೂ ಆಂದೋಲನ ನಡೆಸಬೇಕಿದೆ ಎಂದು ಹೇಳಿದ ಪೇಜಾವರ ಶ್ರೀಗಳು , ಗೋ‌ಹತ್ಯೆ ನಿರ್ಬಂಧಕ್ಕೆ ಅನುಕೂಲವಾಗುವ ಸರಕಾರ‌‌ಗಳು ಎಲ್ಲಾ ರಾಜ್ಯಗಳಲ್ಲಿ ಬರಬೇಕಿದೆ ಎಂದು ಅವರು ತಿಳಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *