LATEST NEWS
ಪಿಲಿಕುಳ ಜೈವಿನ ಉದ್ಯಾನವನದಲ್ಲಿ ಹುಲಿ ಮರಿ ಸಾವು…!!

ಮಂಗಳೂರು ನವೆಂಬರ್ 14 : ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಎರಡೂವರೆ ವರ್ಷ ವಯಸ್ಸಿನ ಹುಲಿಮರಿಯೊಂದು ಸಾವನಪ್ಪಿದೆ. ಇದರೊಂದಿಗೆ ಪಿಲಿಕುಳದಲ್ಲಿನ ಹುಲಿಗಳ ಸಂಖ್ಯೆ 11ಕ್ಕೆ ಇಳಿದಿದೆ.

ಸಾದಂರ್ಭಿಕ ಚಿತ್ರ
ಕೆಲ ಸಮಯದ ಹಿಂದೆ ಹುಲಿಗಳ ನಡುವಿನ ಕಚ್ಚಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹುಲಿಮರಿಗೆ ಜೈವಿಕ ಉದ್ಯಾನವನದ ವೈದ್ಯಾಧಿಕಾರಿ ಡಾ.ವಿಷ್ಣು ದತ್, ಡಾ.ಮಧುಸೂದನ ಮತ್ತು ಡಾ.ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದು, ಅದು ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳಿತ್ತು. ಆದರೆ ಕಳೆದ ಶುಕ್ರವಾರ ಮಧ್ಯಾಹ್ನ ಹುಲಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಈ ವೇಳೆ ವೈದ್ಯಾಧಿಕಾರಿಗಳು ಶುಶ್ರೂಷೆ ನಡೆಸಿದರೂ ಫಲಕಾರಿಯಾಗದೆ ಅದು ಅಸುನೀಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕರು ತಿಳಿಸಿದ್ದಾರೆ.
