LATEST NEWS
ಮದುವೆಯಾಗಿ 15 ದಿನಕ್ಕೆ ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ ಹೆಂಡತಿ

ಉತ್ತರಪ್ರದೇಶ ಮಾರ್ಚ್ 25: ಇಷ್ಟ ಇಲ್ಲದೇ ಮದುವೆಯಾದ ಹಿನ್ನಲೆ ಮದುವೆಯಾಗಿ 15ದಿನಗಳಲ್ಲೇ ಪತ್ನಿ ತನ್ನ ಪತಿಯನ್ನು 2 ಲಕ್ಷ ರೂ.ಗೆ ಸುಪಾರಿ ಕೊಟ್ಟು ಗಂಡನನ್ನು ಹತ್ಯೆ ಮಾಡಿಸಿದ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಮಹಿಳೆ, ಆಕೆಯ ಪ್ರಿಯಕರ ಮತ್ತು ಕೊಲೆಗಾರನನ್ನು ಬಂಧಿಸಲಾಗಿದೆ.
ಕೊಲೆಯಾದ ವ್ಯಕ್ತಿಯನ್ನು ದಿಲೀಪ್ ಯಾದವ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಇಬ್ಬರು ಆರೋಪಿಗಳಾದ ಪ್ರಗತಿ ಯಾದವ್ ಮತ್ತು ಅನುರಾಗ್ ಯಾದವ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಅವರ ಪೋಷಕರು ಅವರ ಸಂಬಂಧವನ್ನು ಒಪ್ಪಲಿಲ್ಲ ಮತ್ತು ಮಾರ್ಚ್ 5 ರಂದು ಪ್ರಗತಿಯನ್ನು ದಿಲೀಪ್ ಜೊತೆ ಬಲವಂತವಾಗಿ ಮದುವೆ ಮಾಡಿದರು.

ಮಾರ್ಚ್ 19 ರಂದು, ಪೊಲೀಸರು ದಿಲೀಪ್ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡು ಹೊಲದಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಬಿಧುನಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಅವರ ಸ್ಥಿತಿ ಹದಗೆಟ್ಟ ಕಾರಣ ಮಧ್ಯಪ್ರದೇಶದ ಗ್ವಾಲಿಯರ್‌ಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದಿಲೀಪ್ ಸಾವನಪ್ಪಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮದುವೆಯ ನಂತರವೂ, ಪ್ರಗತಿ ತನ್ನ ಗ್ರಾಮದ ಅನುರಾಗ್ ಅಲಿಯಾಸ್ ಬಬ್ಲು ಅಲಿಯಾಸ್ ಮನೋಜ್ ಯಾದವ್ ಜೊತೆ ಪ್ರೀತಿ ಉಳಿಸಿಕೊಂಡಿದ್ದಳು. ಇದು ದಿಲೀಪ್ ಹಾಗೂ ಪ್ರಗತಿ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು.
ದಿಲೀಪ್ ಶ್ರೀಮಂತನಾಗಿದ್ದು ಅವನನ್ನು ಹತ್ಯೆ ಮಾಡಿದರೆ ಆ ಆಸ್ತಿಯಲ್ಲಿ ತಾನು ಮತ್ತು ಅನುರಾಗ್ ಒಳ್ಳೆಯ ಜೀವನ ಸಾಗಿಸಬಹುದು ಎಂದು ಕನಸು ಕಂಡಿದ್ದಳು. ರಾಮ್ ಚೌಧರಿ ಎಂಬಾತನಿಗೆ 2 ಲಕ್ಷ ರೂ. ಸುಪಾರಿ ಕೊಟ್ಟಿದ್ದಳು. ಬಳಿಕ ರಾಮ್ ಜಿ ದಿಲೀಪ್ನನ್ನು ಹೊಲಕ್ಕೆ ಕರೆದೊಯ್ದು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ. ಆದರೆ ದಿಲೀಪ್ ಇನ್ನೂ ಸತ್ತಿರಲಿಲ್ಲ. ಪೊಲೀಸರು ಮೊದಲು ರಾಮ್ಜಿನನ್ನು ಬಂಧಿಸಿದ್ದರು, ಆತನ ಬಳಿಯಿಂದ ಎರಡು ಜೀವಂತ ಕಾರ್ಟ್ರಿಡ್ಜ್ಗಳ ಜತೆಗೆ ಒಂದು ಪಿಸ್ತೂಲ್ನ್ನು ವಶಪಡಿಸಿಕೊಳ್ಳಲಾಗಿದೆ.
Pingback: ಪುತ್ತೂರು: ಭಕ್ತಕೋಡಿ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ಎಸ್ .ಡಿ ವಿಷ ಸೇವಿಸಿ ಆ*ತ್ಮಹ*ತ್ಯೆ - themangaloremirror.in