UDUPI
ಜ್ವರಕ್ಕೆ 2 ಲಕ್ಷ ಬಿಲ್…ಕೊರೊನಾಗಿಂತ ಬಿಗ್ ಶಾಕ್ ನೀಡಿದ ಆಸ್ಪತ್ರೆ ಬಿಲ್
ಉಡುಪಿ, ಜುಲೈ 17 : ಜ್ವರ ಇದೆ ಎಂದು ಖಾಸಗಿ ಆಸ್ಪತ್ರೆಗೆ ದಾಖಲಾದ ಇಬ್ಬರಿಗೆ ಆಸ್ಪತ್ರೆಯ ಬಿಲ್ ನೋಡಿ ಮತ್ತೆ ಜ್ವರ ಬರುವ ಪರಿಸ್ಥಿತಿ ಬಂದಿದೆ. ಕೊರೊನಾಗಿಂತ ಆಸ್ಪತ್ರೆ ಬಿಲ್ ನೋಡಿದ ರೋಗಿಗಳಿಗೆ ಶಾಕ್ ಆಗಿದೆ. ಇಬ್ಬರಿಗೂ ಜ್ವರಕ್ಕೆ ಆಸ್ಪತ್ರೆ ಮಾಡಿರುವ ಬಿಲ್ 2 ಲಕ್ಷ….!!
ಬ್ರಹ್ಮಾವರ ತಾಲೂಕಿನ ಸೈಬರ್ ಕಟ್ಟೆ ಸಮೀಪದ ಕಲ್ಗದ್ದೆ ನಿವಾಸಿಗಳಾದ ಒಂದೇ ಕುಟುಂಬದ ರಾಜೇಶ್ ಮತ್ತು ರಾಜೀವಿ ಎಂಬಿಬ್ಬರಲ್ಲೂ ಜ್ವರ ಕಾಣಿಸಿಕೊಂಡಿತ್ತು. ಕೊರೊನಾ ಭಯದ ಹಿನ್ನೆಲೆಯಲ್ಲಿ ಇಬ್ಬರು ತಕ್ಷಣ ಬ್ರಹ್ಮಾವರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಆರು ದಿನಗಳ ಕಾಲ ಇವರಿಬ್ಬರಿಗೂ ಜ್ವರಕ್ಕೆ ಚಿಕಿತ್ಸೆ ನೀಡಲಾಗಿತ್ತು. ನಂತರ ಇಬ್ಬರ ಗಂಟಲು ದ್ರವ ವರದಿ ಬಂದಿದ್ದು, ಇಬ್ಬರಿಗೂ ಕೊರೊನಾ ಸೊಂಕು ದೃಢಪಟ್ಟಿದೆ. ಈ ಹಿನ್ನಲೆ ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ಶಿಫ್ಟ್ ಮಾಡಲು ಖಾಸಗಿ ಆಸ್ಪತ್ರೆಯಿಂದ ಸೂಚನೆ ರವಾನೆಯಾಗಿದೆ.
ಈ ಹಿನ್ನಲೆ ಖಾಸಗಿ ಆಸ್ಪತ್ರೆ ಅಂಬ್ಯುಲೆನ್ಸ್ ತಂದು ಬಿಲ್ ಕಟ್ಟಿ ಎಂದು ತಾಕೀತು ಮಾಡಿದೆ. ಹೀಗಾಗಿ ಇಬ್ಬರು ಕೊವೀಡ್ ಆಸ್ಪತ್ರೆಗೆ ಸ್ಥಳಾಂತರಿಸಲು ಮುಂದಾದಾಗ ಖಾಸಗಿ ಆಸ್ಪತ್ರೆಯ ಒಟ್ಟು ಒಂದು ಮನೆಯ ಇಬ್ಬರು ರೋಗಿಗಳಿಗೆ 2,31,830 – ರೂಪಾಯಿ ಬಿಲ್ ಮಾಡಿದೆ. ಒಂದೇ ಮನೆಯ ಇಬ್ಬರಿಗೆ ಪ್ರತ್ಯೇಕವಾಗಿ 57,600 ರೂ. ಪಿಪಿಟಿ ಕಿಟ್ ಚಾರ್ಚ್ ಮಾಡಿದೆ. ಬಿಲ್ ನೋಡಿದ ರೋಗಿಗಳ ಮನೆಯವರಿಗೆ ದಿಕ್ಕೇ ತೋಚದಂತಾಗಿದೆ.