Connect with us

BANTWAL

2.20 ಲಕ್ಷದ ಕಾರು- ಗಾಂಜಾ ವಶಪಡಿಸಿಕೊಂಡ ವಿಟ್ಲ ಪೊಲೀಸರು..!

ಬಂಟ್ವಾಳ :  ಕಾರಿನಲ್ಲಿ ಸಾಗಾಟಮಾಡುತ್ತಿದ್ದ ಅಕ್ರಮ ಗಾಂಜಾವನ್ನು  ವಿಟ್ಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾತ್ರಿ ಸುಮಾರು 7.30 ಗಂಟೆ ಸಮಯಕ್ಕೆ ಬಂಟ್ವಾಳ ತಾಲೂಕು ವಿಟ್ಲ ಪಡೂರು ಗ್ರಮದ ಕೊಡಂಗಾಯಿ ಎಂಬಲ್ಲಿ ವಾಹನ ತಪಾಸಣೆ ನಡೆಸುವಾಗ ಅನುಮಾನಾಸ್ಪದವಾಗಿ ಬಂದ ಕೆಎ 20 ಝಡ್ 3143 ನೇ ಮಾರುತಿ ಆಲ್ಟೋ ಕಾರನ್ನು ತಪಾಸಣೆ ನಡೆಸಿದಾಗ  ಕಾರಿನಲ್ಲಿ 2 ಕೆಜಿಯಷ್ಟು ಗಾಂಜಾ  ದೊರೆತ್ತಿದ್ದು 20 ಸಾವಿರ  ಮೌಲ್ಯದ ಗಾಂಜಾ , 2 ಲಕ್ಷ ಮೌಲ್ಯದ ಕಾರು ಮತ್ತು  ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿಯನ್ನು ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನ ಪಾತೂರು ಕಜೆ ವಾಸಿ ನಾಸಿರ್  ಎಂದು ಗುರುತ್ತಿಸಲಾಗಿದೆ.

ಮಾನ್ಯ ಮಂಗಳೂರು ಸೆಷನ್ಸ್ ನ್ಯಾಯಾಲಯಕ್ಕೆ  ಆರೋಪಿಯನ್ನು ಹಾಜರುಪಡಿಸಿದ್ದು , ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ .

ಈ ಪ್ರಕರಣದ ಇತರ  ಆರೋಪಿಗಳಾದ ಬಾಕ್ರಬೈಲಿನ ಬಾರಿಕ್ ಹಾಗೂ ಪಾತೂರಿನ ಮುಸ್ತಾಫರವರು ತಲೆ ಮರೆಸಿಕೊಂಡಿದ್ದು ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿರುತ್ತಾರೆ .

ಪ್ರಕರಣದ ತನಿಖೆಯನ್ನು ಬಂಟ್ವಾಳ ಪೊಲೀಸು ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ್ ರವರು ನಡೆಸುತ್ತಿದ್ದಾರೆ.