LATEST NEWS
ದಕ್ಷಿಣಕನ್ನಡ ದಾಖಲೆಯ 183 ಮಂದಿಗೆ ಕೊರೊನಾ ಸೊಂಕು…!!
ಮಂಗಳೂರು ಜುಲೈ 8: ಮಂಗಳೂರಿನಲ್ಲಿ ಇಂದು ಕೊರೊನಾ ಮಾಹಾಸ್ಪೋಟ ಸಂಭವಿಸಿದ್ದು, ದಾಖಲೆಯ 183 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇದೇ ಮೊದಲ ಬಾರಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಕೊರೊನಾ ಸೊಂಕು ದಾಖಲಾಗಿದೆ. ಇದರೊಂದಿಗೆ ದಕ್ಷಿಣಕನ್ನಡದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 1542ಕ್ಕೆ ಏರಿಕೆಯಾಗಿದೆ.
ಇಂದು ಪತ್ತೆಯಾದ 183 ಪ್ರಕರಣಗಳಲ್ಲಿ ಕೊರೊನಾ ರೋಗಿಯ ಪ್ರಾಥಮಿಕ ಸಂಪರ್ಕದಿಂದ 63 ಜನರಿಗೆ ಸೊಂಕು ಹರಡಿದೆ. ದ್ವಿತಿಯ ಸಂಪರ್ಕದಿಂದ ಇಬ್ಬರಿಗೆ ಕೊರೊನಾ ಬಂದಿದೆ. ಜಿಲ್ಲೆಯಲ್ಲಿ ನಡೆಸಿ ರಾಂಡಮ್ ಟೆಸ್ಟ್ ನಿಂದ 22 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. 54 ಜನರಲ್ಲಿ ಸಂಪರ್ಕ ಪತ್ತೆ ಹಚ್ಚಬೇಕಾಗಿದೆ. ಸೌದಿ, ಮಸ್ಕತ್, ದುಬೈನಿಂದ ಆಗಮಿಸಿದ್ದ 5 , ಸರ್ಜರಿ ಪೂರ್ವ ಪರೀಕ್ಷೆಗೆ ಒಳಗಾದ 5 ಮಂದಿ, SARI ಲಕ್ಷಣಗಳಿದ್ದ ನಾಲ್ಕು ಮಂದಿಗೆ ಸೋಂಕು ಪತ್ತೆ .
ಸದ್ಯ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1542 , ಅದರಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 819 ಕ್ಕೇರಿಕೆಯಾಗಿದೆ. ಇಂದು ಕೊರೊನಾ ಮುಕ್ತರಾಗಿ 12 ಮಂದಿ ಬಿಡುಗಡೆ ಹೊಂದಿದ್ದಾರೆ.