DAKSHINA KANNADA
ಮಂಗಳೂರು ಬಿಜೈಯಿಂದ ಹದಿಹರೆಯದ ಯುವತಿ ನಾಪತ್ತೆ..!

ಮಂಗಳೂರು: ಮಂಗಳೂರು ನಗರದ ಬಿಜೈಯಿಂದ ಹದಿಹರೆಯದ ಯುವತಿಯೋರ್ವಳು ನಾಪತ್ತೆಯಾಗಿದ್ದು ಈ ಬಗ್ಗೆ ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲಿಸ್ತಾ ಫೆರಾವೊ (18) ನಾಪತ್ತೆಯಾದ ಯುವತಿಯಾಗಿದ್ದಾಳೆ.
ಕೆಲಿಸ್ತಾ SSLC ನಂತರ ಮನೆಯಲ್ಲೇ ಇದ್ದು ಬಳಿಕ ಆಟೊಮೊಬೈಲ್ ಕೋರ್ಸ್‌ಗೆ ಸೇರ್ಪಡೆಗೊಂಡಿದ್ದರು. ಮಂಗಳವಾರ ಮಧ್ಯಾಹ್ನ 12.15ರ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದರು. ಇದು ಮನೆಯವರ ಗಮನಕ್ಕೆ ಬಂದ ಕೂಡಲೇ ಅವರು ಹುಡುಕಾಟ ಆರಂಭಿಸಿದರು. ಸಿಸಿ ಕೆಮರಾವೊಂದನ್ನು ಪರಿಶೀಲಿಸಿದಾಗ ಈಕೆ ಆಟೋರಿಕ್ಷಾದಲ್ಲಿ ಹೋಗುತ್ತಿರುವ ದೃಶ್ಯ ಸೆರೆಯಾಗಿತ್ತು. ಕೆಲಿಸ್ತಾ ಕನ್ನಡ, ತುಳು, ಇಂಗ್ಲಿಷ್, ಕೋಂಕಣಿ ಭಾಷೆಗಳನ್ನು ಮಾತನಾಡುತ್ತಾಳೆ. ಬಿಳಿ ಟಾಪ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಳು. ಮಾಹಿತಿ ದೊರೆತವರು ಬರ್ಕೆ ಪೊಲೀಸ್ ಠಾಣೆ (0824-2220522) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
