LATEST NEWS
ಪಾಕಿಸ್ತಾನ – ಎರಡು ಗಂಟೆಗಳ ಕಾಲ ಪ್ರವಾಹದಲ್ಲಿ ಸಿಲುಕಿದರೂ ರಕ್ಷಣೆ ಬಾರದ ಸರಕಾರ – 18 ಮಂದಿ ನೀರು ಪಾಲು

ಪಾಕಿಸ್ತಾನ ಜೂನ್ 28: ಪಾಕಿಸ್ತಾನದ ಸ್ವಾತ್ ನದಿಯಲ್ಲಿ ಉಂಟಾದ ಹಠಾತ್ ಪ್ರವಾಹಕ್ಕೆ 18 ಮಂದಿ ನೀರುಪಾಲಾದ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶುಕ್ರವಾರ ಸಂಭವಿಸಿದೆ.
ಇದುವರೆಗೆ ಏಳು ಜನರ ಶವಗಳನ್ನು ಹೊರತೆಗೆಯಲಾಗಿದೆ ಎಂದು ವರದಿಗಳು ತಿಳಿಸಿವೆ.
18 ಜನರಿದ್ದ ಕುಟುಂಬವು ಪ್ರವಾಸಕ್ಕಾಗಿ ಸ್ವಾತ್ ನದಿ ತೀರಕ್ಕೆ ಬಂದಿದ್ದರು. ನದಿಯ ಮಧ್ಯೆ ಇರುವ ಬಂಡೆಯೊಂದರಲ್ಲಿ ಕುಳಿತುಕೊಂಡಿರುವ ಸಂದರ್ಭ ಏಕಾಏಕಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ದಿಢೀರ್ ಪ್ರವಾಹ ಉಂಟಾಗಿದ್ದು, ನೀರಿನ ನಡುಗಡ್ಡೆಯಲ್ಲಿ ನಿಂತಿದ್ದ ಜನ ನೋಡ ನೋಡುತ್ತಲೇ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಸ್ವಾತ್ ನದಿಯು ಪಾಕಿಸ್ತಾನದ ಖೈಬರ್-ಪಖ್ತುನ್ಖ್ವಾ ಪ್ರಾಂತ್ಯದ ಉತ್ತರ ಪ್ರದೇಶದಲ್ಲಿ ಹರಿಯುವ ನದಿಯಾಗಿದೆ. ಸ್ವಾತ್ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಈ ಪ್ರವಾಹ ಉಂಟಾಗಿದೆ. ಕಾಣೆಯಾದ ಉಳಿದ ವ್ಯಕ್ತಿಗಳನ್ನು ಪತ್ತೆಹಚ್ಚಲು ದೊಡ್ಡ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.