MANGALORE
ಮತ್ತೊಂದು ಅಕ್ಷರ ಜಾತ್ರೆ ಗೆ ಸಿದ್ದವಾಗುತ್ತಿರುವ 14ನೇ ಆಳ್ವಾಸ್ ನುಡಿಸಿರಿ
ಮತ್ತೊಂದು ಅಕ್ಷರ ಜಾತ್ರೆ ಗೆ ಸಿದ್ದವಾಗುತ್ತಿರುವ 14ನೇ ಆಳ್ವಾಸ್ ನುಡಿಸಿರಿ
ಮಂಗಳೂರು ನವೆಂಬರ್ 26: ಜೈನ ಕಾಶಿ ಮೂಡಬಿದ್ರೆಯಲ್ಲಿ ಆಳ್ವಾಸ್ ನುಡಿಸಿರಿಯ ಕಂಪು ಹಬ್ಬಿದೆ..14 ನೇ ವರ್ಷದ ಆಳ್ವಾಸ್ ನುಡಿಸಿರಿ ಸಮ್ಮೇಳನ ಡಿಸೆಂಬರ್ 1ರಿಂದ 3 ರವರೆಗೆ ನಡೆಯಲಿದ್ದು ಕಲಾಸಕ್ತರ ಕುತೂಹಲಕ್ಕೆ ಅಂತಿಮ ಕ್ಷಣಗಣನೆ ಆರಂಭವಾಗಿದೆ.
ಮೂಡಬಿದ್ರೆಯಲ್ಲಿ ಆಳ್ವಾಸ್ ನುಡಿಸಿರಿಯ ವೈಭವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಡಿಸೆಂಬರ್ 1 ರಿಂದ 3 ರವರೆಗೆ ಜೈನ ಕಾಶಿಯಲ್ಲಿ ಸಾಹಿತ್ಯ ಕಲೆ ಸಂಸ್ಕೃತಿಯ ರಸದೌತಣ ನಡೆಯಲ್ಲಿದ್ದು ಲಕ್ಷಾಂತಕ ಕಲಾಸಕ್ತರ ಸಮಾಗಮಕ್ಕೆ ಮೂಡಬಿದ್ರೆಯಲ್ಲಿ ವೇದಿಕೆ ಯಾಗಲಿದೆ.14 ನೇ ವರ್ಷದ ಆಳ್ವಾಸ್ ನುಡಿಸಿರಿಯನ್ನು ಖ್ಯಾತ ವಿಮರ್ಶಕಗಾರ ಡಾ ಸಿಎನ್ ರಾಮಚಂದ್ರನ್ ಉಧ್ಘಾಟಿಸಲಿದ್ದಾರೆ. ನುಡಿಸಿರಿಯ ಸರ್ವಧ್ಯಕ್ಷತೆಯನ್ನು ಚಲನಚಿತ್ರ ನಿರ್ದೇಶಕರ ನಾಗತಿಹಳ್ಳಿ ಚಂದ್ರಶೇಖರ್ ವಹಿಸಲಿದ್ದಾರೆ.3 ದಿನಗಳ ಕಾಲ 12 ವೇದಿಕೆಗಳಲ್ಲಿ ಕನ್ನಡ ನಾಡು ನುಡಿಯ ಕುರಿತ ಗಂಭೀರ ಚರ್ಚೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿಚಾರಗೋಷ್ಠಿಗಳು ನಡೆಯಲಿದೆ.
ಈ ಭಾರಿಯ ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲಿ 15 ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರಧಾನವಾಗಲಿದೆ.ಆಳ್ವಾಸ್ ನುಡಿಸಿರಿಯ ವಿಶೇಷ ಅಂಗವಾಗಿ ಆಳ್ವಾಸ್ ಕೃಷಿಸಿರಿಯೂ ನಡೆಯಲಿದ್ದು 3 ದಿನಗಳ ಕಾಲವೂ ಕೃಷಿಕರಿಗೆ ಮಾಹಿತಿ ಮತ್ತು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ನವೆಂಬರ್ 30 ರಂದು ಕೃಷಿಸಿರಿಯನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಉಧ್ಘಾಟಿಸಲಿದ್ದು, ಜಾನುವಾರು ಪ್ರದರ್ಶನ, ಫಲಪುಷ್ಟ ಪ್ರದರ್ಶನ, ಅತೀ ವಿರಳ ಸಮುದ್ರ ಚಿಪ್ಪುಗಳ ಪ್ರದರ್ಶನ ಸೇರಿದಂತೆ ಕುತೂಹಲಕಾರಿ ಸಂಗತಿಗಳನ್ನು ಕೃಷಿಸಿರಿಯು ವೇದಿಕೆ ಯಾಗಲಿದೆ. ಈಗಾಗಲೇ ವಿದ್ಯಾರ್ಥಿಗಳು ,ಸಾಹಿತ್ಯಾಭಿಮಾನಿಗಳು ನೋದಂಣಿ ಮಾಡಿಸಿದ್ದು ಲಕ್ಷಾಂತರ ಜನ ಆಳ್ವಾಸ್ ನುಡಿಸಿರಿ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.