Connect with us

BELTHANGADI

ಬೆಳ್ತಂಗಡಿ – ಚಾರ್ಮಾಡಿ ಮುಹಿದ್ದೀನ್ ಜುಮಾ ಮಸೀದಿಯ ಧರ್ಮಗುರುವಿನ ಮೇಲೆ ತಂಡದಿಂದ ಹಲ್ಲೆ

ಬೆಳ್ತಂಗಡಿ ಡಿಸೆಂಬರ್ 18: ಚಾರ್ಮಾಡಿ ಮುಹಿದ್ದೀನ್ ಜುಮಾ ಮಸೀದಿಯ ಧರ್ಮಗುರುವಿನ ಮೇಲೆ ಸುಮಾರು 12 ಜನರ ತಂಡ ಹಲ್ಲೆ ನಡೆಸಿದ ಘಟನೆ ನಡೆದಿದೆ.


ಗಾಯಗೊಂಡವರನ್ನು ಚಾರ್ಮಾಡಿ ಗ್ರಾಮದ ಮುಹಿದ್ದೀನ್ ಜುಮಾ ಮಸೀದಿಯ ಧರ್ಮಗುರು ಶಮೀರ್ ಮುಸ್ಲಿಯಾರ್ (37) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾರ್ಮಾಡಿ ಗ್ರಾಮದ ಮುಹಿದ್ದೀನ್ ಜುಮಾ ಮಸೀದಿಯ ಧರ್ಮಗುರು ಶಮೀರ್ ಮುಸ್ಲಿಯಾರ್ (37) ಎಂಬವರಿಗೆ ಸ್ಥಳೀಯರಾದ ಬದ್ರುದ್ದೀನ್, ಸಂಶುದ್ದೀನ್, ಅಹ್ಮದ್ ಟಿಬಿ ರೋಡ್, ನೌಫಲ್, ಅನ್ಸರ್, ಮುನೀರ್ ಆಸಿಫ್, ಅಫೀಝ್, ಅಫ್ರೀಝ್, ಶರೀಫ್,‌ ಅಬ್ದುಲ್ ಖಾದರ್ ಮತ್ತಿತರರು ಮಸೀದಿಗೆ ನುಗ್ಗಿ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಶಮೀರ್ ಮುಸ್ಲಿಯಾರ್ ದೂರು ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *