Connect with us

FILM

ಗಂಟೆಗೆ 11 ಸಾವಿರ ಟಿಕೆಟ್ ಮಾರಾಟ: ‘ಸು ಫ್ರಮ್ ಸೋ’ ಶುಕ್ರವಾರ ದಾಖಲೆಯ ಕಲೆಕ್ಷನ್

ಬೆಂಗಳೂರು, ಆಗಸ್ಟ್ 02: ಸು ಫ್ರಮ್ ಸೋ’ ಎರಡನೇ ವಾರವೂ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾ ಎರಡನೇ ವೀಕೆಂಡ್​ಗೆ ಕಾಲಿಟ್ಟಿದ್ದು, ಎಲ್ಲ ಕಡೆಗಳಲ್ಲಿ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಒಂದಕ್ಕೆ ಈ ರೀತಿಯ ಪ್ರತಿಕ್ರಿಯೆ ಸಿಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ವೀಕೆಂಡ್​ನಲ್ಲಿ ಸಿನಿಮಾ ನೋಡಲು ಜನರು ಮುಗಿ ಬೀಳುತ್ತಿದ್ದಾರೆ.

ಆಗಸ್ಟ್ 1ರಂದು ‘ಸು ಫ್ರಮ್ ಸೋ’ ಸಿನಿಮಾದ ಟಿಕೆಟ್​ಗಳು ಗಂಟೆಗೆ ಸುಮಾರು 11 ಸಾವಿರದಷ್ಟು ಮಾರಾಟ ಆಗಿವೆ. ಈ ಮೂಲಕ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ದಾಖಲೆಯನ್ನು ಉಡೀಸ್ ಮಾಡಿದೆ. ಮ್ಯಾಕ್ಸ್ ಸಿನಿಮಾ ಈ ಮೊದಲು ಗಂಟೆಗೆ ಸರಿ ಸುಮಾರು 9 ಸಾವಿರ ಟಿಕೆಟ್​ಗಳನ್ನು ಮಾರಾಟ ಮಾಡಿತ್ತು. ಈಗ ಆ ದಾಖಲೆಯನ್ನು ಸುದೀಪ್ ಅಭಿಮಾನಿ ರಾಜ್ ಬಿ ಶೆಟ್ಟಿ ಅವರು ಮುರಿದಿದ್ದಾರೆ.‘ಬಾವ ಬಂದರೋ..’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ರಾಜ್ ಬಿ. ಶೆಟ್ಟಿ ಗ್ಯಾಂಗ್

ಇನ್ನು, ಒಂದೇ ದಿನಕ್ಕೆ ಸಿನಿಮಾಗೆ 1.67 ಲಕ್ಷ ಟಿಕೆಟ್​ಗಳು ಮಾರಾಟ ಆದ ಬಗ್ಗೆ ವರದಿ ಆಗಿದೆ. ಈ ವಿಚಾರವನ್ನು ಫ್ಯಾನ್ ಪೇಜ್​ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ‘ಸು ಫ್ರಮ್ ಸೋ’ ಗೆಲುವಿಗೆ ಇಡೀ ತಂಡ ಹಾಗೂ ಸಿನಿ ಪ್ರಿಯರು ತುಂಬಾನೇ ಖುಷಿಪಟ್ಟಿದ್ದಾರೆ. ಸಿನಿಮಾದ ಅಬ್ಬರ ಇನ್ನೂ ಕೆಲ ವಾರ ಮುಂದುವರಿಯುವ ಸಾಧ್ಯತೆ ಇದೆ.

‘ಸು ಫ್ರಮ್ ಸೋ’ ಸಿನಿಮಾ ಕಲೆಕ್ಷನ್​ನಲ್ಲೂ ದಾಖಲೆ ಬರೆದಿದೆ. ಈ ಚಿತ್ರ ಶುಕ್ರವಾರ 3.76 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಗಳಿಕೆ 23 ಕೋಟಿ ರೂಪಾಯಿ ಆಗಿದೆ. ಮಲಯಾಳಂನಲ್ಲೂ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿಯೂ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *