LATEST NEWS
ಗುರುಗ್ರಾಮ್ – ಸ್ಮಶಾನದ ಗೋಡೆ ಕುಸಿದು ಬಾಲಕಿ ಸೇರಿದಂತೆ 5 ಮಂದಿ ಬಲಿ

ಗುರುಗ್ರಾಮ್ ಎಪ್ರಿಲ್ 21 : ಗುರುಗ್ರಾಮ್‌ನಲ್ಲಿ ನಡೆದ ದುರಂತ ಘಟನೆಯೊಂದರಲ್ಲಿ, ಅರ್ಜುನ್ ನಗರ ಪ್ರದೇಶದಲ್ಲಿ ಸ್ಮಶಾನದ ಗೋಡೆ ಕುಸಿದು ಯುವತಿ ಸೇರಿದಂತೆ ನಾಲ್ವರು ಜೀವ ಕಳೆದುಕೊಂಡಿದ್ದಾರೆ.
ಅರ್ಜುನ್ ನಗರ ಬದಿಯ ಸ್ಮಶಾನ ಗೋಡೆ ಕುಸಿದು ಈ ದುರಂತ ಸಂಭವಿಸಿದೆ. ಬಾಲಕಿ ಸೇರಿದಂತೆ ನಾಲ್ಕು ಮಂದಿ ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟಿದ್ದಾರೆ

ಮೃತರನ್ನು 11 ವರ್ಷದ ತಾನ್ಯಾ, 70 ವರ್ಷದ ದೇವಿ ದಯಾಳ್, 54 ವರ್ಷದ ಮನೋಜ್ ಗಾಬಾ ಮತ್ತು 52 ವರ್ಷದ ಕೃಷ್ಣ ಕುಮಾರ್ ಎಂದು ಗುರುತಿಸಲಾಗಿದೆ. ಗಾಯಾಳು ಅರ್ಜುನ್ ನಗರದ ನಿವಾಸಿ ದೀಪಾ ಪ್ರಧಾನ್ ಎಂದು ಗುರುತಿಸಲಾಗಿದ್ದು, ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಕಾರಣಗಳ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಎಲ್ಲಾ ಅಗತ್ಯ ಕಾನೂನು ಕಾರ್ಯವಿಧಾನಗಳನ್ನು ಅನುಸರಿಸಲಾಗಿದೆ ಎಂದು ಪೊಲೀಸ್ ತಂಡ ತಿಳಿಸಿದೆ