LATEST NEWS
ಕೊನೆಗೂ ಪೊಲೀಸ್ ಠಾಣೆಗೆ ಬಂದ 10 ಲಕ್ಷದ ವಾರಸುದಾರ….!!

ಮಂಗಳೂರು ಡಿಸೆಂಬರ್ 13: ಪಂಪ್ ವೆಲ್ ನಲ್ಲಿ ಕುಡುಕನೊಬ್ಬನಿಗೆ ಸಿಕ್ಕ 10 ಲಕ್ಷದ ಬಂಡಲ್ ಕಥೆಗೆ ಟ್ವಿಸ್ಟ್ ಸಿಕ್ಕಿದ್ದು, ಇದೀಗ ನೋಟಿನ ಬಂಡಲ್ ನನ್ನದೇ ಎಂದು ವ್ಯಕ್ತಿಯೊಬ್ಬರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.
ಪಂಪ್ ವೆಲ್ ಬಳಿ ವ್ಯಕ್ತಿಯೊಬ್ಬರಿಗೆ ನೋಟಿನ ಕಂತೆಯಿಂದ ಚೀಲವೊಂದು ಸಿಕ್ಕಿತ್ತು, ಬಳಿಕ ಆತ ಅದರಲ್ಲಿ ಕೂಲಿಕಾರನಿಗೆ ಕೆಲವು ಕಂತೆಗಳನ್ನು ನೀಡಿದ್ದು, ಕೊನೆಗೆ ಪೊಲೀಸ್ ಠಾಣೆಯಲ್ಲಿ ಈ ಸ್ಟೋರಿ ಬಂದು ನಿಂತಿದ್ದು, ಪೊಲೀಸ್ ಆಯುಕ್ತರು ಸ್ಪಷ್ಟನೆ ನಿಡಿದ್ದರು.
ಇದೀಗ ವ್ಯಕ್ತಿಯೊಬ್ಬರು ತಾನು ಅಡಿಕೆ ವ್ಯಾಪಾರಿಯಾಗಿದ್ದು ಹಣ ತೆಗೆದುಕೊಂಡು ಹೋಗುವಾಗ ಬಿದ್ದಿದ್ದು, ಅದರಲ್ಲಿ ಒಟ್ಟು 10 ಲ.ರೂ ಇತ್ತು ಎಂಬುದಾಗಿ ಆ ವ್ಯಕ್ತಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಈ ಬಗ್ಗೆ ನ್ಯಾಯಾಲಯದಲ್ಲಿಯೇ ದೃಢಪಡಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಪೊಲೀಸರು ಆ ವ್ಯಕ್ತಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.
.
