BELTHANGADI
ಬೆಳ್ತಂಗಡಿಯಲ್ಲಿ ಕಾಣಿಸಿಕೊಂಡ 10 ಅಡಿ ಉದ್ದದ ಕಾಳಿಂಗ ಸರ್ಪ
ಬೆಳ್ತಂಗಡಿಯಲ್ಲಿ ಕಾಣಿಸಿಕೊಂಡ 10 ಅಡಿ ಉದ್ದದ ಕಾಳಿಂಗ ಸರ್ಪ
ಮಂಗಳೂರು ಜುಲೈ 16: ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮದಲ್ಲಿ ಈ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಮಳೆಗಾಲದಲ್ಲಿ ಆಹಾರ ಹುಡುಕುತ್ತಾ ಕಾಳಿಂಗ ಸರ್ಪಗಳು ಸುತ್ತುವುದು ಸರ್ವೆಸಾಮಾನ್ಯ ಎಂದು ಹೇಳಲಾಗುತ್ತವೆ.
ಆದರೆ ಕಾಳಿಂಗ ಸರ್ಪಗಳು ಆಹಾರ ಅರಸಿ ಜನವಸತಿ ಪ್ರದೇಶಕ್ಕೆ ಬರುವುದು ಅಪರೂಪ. ಇಂತಹ ಭಾರೀ ವಿಷಯುಕ್ತ ಹಾವುಗಳನ್ನು ಕಂಡ ಕೂಡಲೇ ಜನ ಹೆದರುತ್ತಾರೆ. ಆದರೆ, ಮಿತ್ತಬಾಗಿಲು ಗ್ರಾಮದ ಪುನ್ಕೆದಡಿ ಎಂಬಲ್ಲಿ 12 ಅಡಿ ಉದ್ದದ ಭಾರೀ ಕಾಳಿಂಗ ಸರ್ಪವನ್ನು ಕಂಡ ಕೂಡಲೇ ಸ್ಥಳೀಯರು ಭಯ ಪಡಲಿಲ್ಲ. ಅದಕ್ಕೆ ತೊಂದರೆ ನೀಡಲಿಲ್ಲ ಬದಲಾಗಿ ಲಾಯಿಲಾ ಎಂಬಲ್ಲಿನ ಹಾವು ಹಿಡಿಯುವ ಸ್ನೇಕ್ ಅಶೋಕ್ ಅವರನ್ನು ಕರೆಸಿದ್ದಾರೆ.
ಈ ಭಾರೀ ಗಾತ್ರದ ಕಾಳಿಂಗನನ್ನು ಚಾಣಾಕ್ಷತನದಿಂದ ಕಾಳಿಂಗನನ್ನು ಹಿಡಿದ ಸ್ನೇಕ್ ಅಶೋಕ್ ನಂತರ ಅದನ್ನು ಕೊಂಡು ಹೋಗಿ ಅರಣ್ಯದಲ್ಲಿ ಬಿಟ್ಟಿದ್ದಾರೆ. ಸ್ನೇಕ್ ಅಶೋಕ್ ಈ ಹಿಂದೆ 20ಕ್ಕೂ ಹೆಚ್ಚು ಕಾಳಿಂಗ ಸರ್ಪಗಳನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ಹೀಗಾಗಿ ಇಲ್ಲಿ ಕಂಡುಬಂದ ಹತ್ತು ಅಡಿ ಉದ್ದದ ಕಾಳಿಂಗನ ಹಿಡಿಯುವುದು ಕಷ್ಟವಾಗಲಿಲ್ಲ. ಸ್ನೇಕ್ ಅಶೋಕ್ ಭಾರೀ ಗಾತ್ರದ ಕಾಳಿಂಗನನ್ನು ಹಿಡುಯುವ ವಿಡಿಯೋ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ.