DAKSHINA KANNADA
10 ದಿನದ ಕಂದಮ್ಮನಿಗೂ ಅಂಟಿದ ಕೊರೊನಾ ಸೋಂಕು

ಪುತ್ತೂರು ಜುಲೈ 9: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕು ವಿಷಮ ಮಟ್ಟಕ್ಕೆ ತಲುಪಿದ್ದು, ಕೊರೋನಾ ಸೋಂಕು ತಗುಲಿ ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಕೂರ್ನಡ್ಕದ ಬಾಣಂತಿಯ ಹತ್ತು ದಿನದ ಶಿಶುವಿಗೂ ಮಾರಕ ಕೊರೋನಾ ಸೋಂಕು ಬಾಧಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಾರದ ಹಿಂದೆ ಸೋಂಕು ತಗುಲಿ ಕೂರ್ನಡ್ಕದ ಬಾಣಂತಿ ಯೊಬ್ಬರು ಮಂಗಳೂರಿನ ವೆನ್ಲಾಕ್ ಕೊವೀಡ್ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದರು.ಮೃತ ಮಹಿಳೆಯ ಅಂತ್ಯಕ್ರಿಯೆ ಸುರಕ್ಷತಾ ಕ್ರಮಗಳೊಂದಿಗೆ ಕೂರ್ನಡ್ಕದ ಜುಮ್ಮಾ ಮಸೀದಿಗೆ ಒಳಪಟ್ಟ ಬೆದ್ರಾಳದ ದಫನ ಭೂಮಿಯಲ್ಲಿ ನೆರವೇರಿಸಕಲಾಗಿತ್ತು. ಇದೀಗ ಆಕೆಯ 10 ದಿನದ ಮಗುವಿಗೂ ಕೊರೋನಾ ಅಂಟಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದೆ. ಇನ್ನು ಮೃತಳ ಸಂಬಂಧಿ ಅಲಂಕಾರು ನಿವಾಸಿ 42 ವರ್ಷದ ವಯಸ್ಸಿನ ಮಹಿಳೆ 4 ದಿನಗಳ ಹಿಂದೆ ಸೋಂಕಿನ ಶಂಕೆ ಹಿನ್ನಲೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಇದೀಗ ಪರೀಕ್ಷಾ ವರದಿ ಪ್ರಕಾರ ಆಕೆಗೂ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಇದೆ
