LATEST NEWS
ಹಿಂದುತ್ವದತ್ತ ಕಾಂಗ್ರೇಸ್ ನ ಒಲವು ವೇದಿಕೆಯಾದ ಧರ್ಮಸಂಸದ್

ಹಿಂದುತ್ವದತ್ತ ಕಾಂಗ್ರೇಸ್ ನ ಒಲವು ವೇದಿಕೆಯಾದ ಧರ್ಮಸಂಸದ್
ಉಡುಪಿ ನವೆಂಬರ್ 24: ಹಿಂದೂ ಶಬ್ದದ ಅಲರ್ಜಿ ಬೆಳೆಸಿಕೊಂಡಿದ್ದ ಕಾಂಗ್ರೇಸ್ ಗೆ ಈಗ ಹಿಂದೂ ಪದವೇ ಅತೀ ಪ್ರಿಯವಾಗುತ್ತಿದೆ. ಒಂದೆಡೆ ಕಾಂಗ್ರೇಸ್ ಯುವರಾಜ ದೇವಸ್ಥಾನಗಳತ್ತ ಮುಖ ಮಾಡಿದರೆ ಇನ್ನೊಂದೆಡೆ ಕಾಂಗ್ರೇಸ್ ಮುಖಂಡರು ಹಿಂದುತ್ವದೆಡೆಗೆ ಆಕರ್ಷಿತರಾಗುತ್ತಿದ್ದಾರೆ.
ತನ್ನ ಜಾತ್ಯಾತೀತ ಪೊರೆಯನ್ನು ಕಾಂಗ್ರೇಸ್ ಕಳಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಜಾತ್ಯಾತೀತ ಶಬ್ದ ಓಟಾಗಿ ಪರಿವರ್ತನೆಯಾಗುತ್ತಿಲ್ಲ ಎಂಬ ಬಗ್ಗೆ ಕಾಂಗ್ರೇಸ್ ಪಾಳಯದಲ್ಲಿ ಗಂಭೀರ ಚಿಂತನೆ ನಡೆದಿದೆ. ವೈಚಾರಿಕತೆ ಕೇವಲ ಪ್ರಚಾರಕ್ಕೆ ಮಾತ್ರ ಎನ್ನುವುದನ್ನ ಕಾಂಗ್ರೇಸ್ ಅರಿತುಕೊಂಡಂತೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೇಸ್ ಹಿಂದೂ ಓಟುಗಳನ್ನು ಸೆಳೆಯಲು ತಂತ್ರಗಾರಿಕೆ ರೂಪಿಸುತ್ತಿದೆ. ಇದರ ಪರಿಣಾಮವಾಗಿ ಕಾಂಗ್ರೇಸ್ ಯುವರಾಜ ಗುಜರಾತ್ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕಂಡ ಕಂಡ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ.

ಇನ್ನೊಂದೆಡೆ ರಾಜ್ಯದ ಕರಾವಳಿಯಲ್ಲಿ ವಿಶ್ವಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಯುತ್ತಿರುವ ಧರ್ಮಸಂಸದ್ ಹಾಗೂ ವಿರಾಟ್ ಹಿಂದೂ ಸಮಾಜೋತ್ಸವಕ್ಕೆ ಕಾಂಗ್ರೇಸ್ ಮುಖಂಡರು ತಮ್ಮ ಬೆಂಬಲ ಸೂಚಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಉಡುಪಿಯಾದ್ಯಂತ ಕಾಂಗ್ರೇಸ್ ಮುಖಂಡರ ಬ್ಯಾನರ್ ಗಳು, ಮೂಲೆ ಮೂಲೆಯಲ್ಲಿ ರಾರಾಜಿಸುತ್ತಿದೆ. ಹಿಂದೂ ಸಮಾವೇಶಗಳಲ್ಲಿ ಕಾಂಗ್ರೇಸ್ ಮುಖಂಡರು ತೊಡಗಿಸಿಕೊಳ್ಳುತ್ತಿರುವುದು ಬಿಜೆಪಿ ಮುಖಂಡರ ಕಣ್ಣು ಕೆಂಪಾಗಿಸಿದೆ. ಇನ್ನೊಂದೆಡೆ ಕಾಂಗ್ರೇಸ್ ಈ ತಂತ್ರಗಾರಿಕೆ ಕೇವಲ ಮುಂಬರುವ ಚುನಾವಣೆ ದೃಷ್ಠಿಯಿಂದ ಮಾಡಲಾಗುತ್ತಿರುವ ಕಸರತ್ತು ಅಷ್ಟೇ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.