Connect with us

    DAKSHINA KANNADA

    ಹಕ್ಕಿಪಿಕ್ಕಿ ವ್ಯಾಪಾರಿಗಳಿಂದ ಸೈನಿಕರಿಗೆ ಅವಮಾನ

    ಪುತ್ತೂರು, ಆಗಸ್ಟ್ 28 : ಬೀದಿಬದಿಯ ವ್ಯಾಪಾರಿಗಳಿಂದ ದೇಶ ಕಾಯುವ ಸೈನಿಕರಿಗೆ ಅವಮಾನ ಮಾಡಿದ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೇಟೆಯಲ್ಲಿ ನಡೆದಿದೆ. ಇಲ್ಲಿ ರಸ್ತೆಯಲ್ಲೇ ಸಂತೆ ನಡೆಸುವ ವ್ಯಾಪಾರಿಗಳು ಜೀವದ ಹಂಗು ತೊರೆದು ದೇಶಕ್ಕಾಗಿ ತನ್ನ ಪ್ರಾಣವನ್ನು ಮುಡುಪಾಗಿಟ್ಟ ಸೈನಿಕ ಭವನ ರಸ್ತೆಯ ಫಲಕವನ್ನು ಕಿತ್ತು ರಸ್ತೆಗೆ ಎಸೆದು ಸೈನಿಕರಿಗೆ ಅವಮಾನ ಮಾಡಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಇಲ್ಲಿನ ಮುಖ್ಯ ರಸ್ತೆಯನ್ನೇ ಸಂತೆಯನ್ನಾಗಿ ಪರಿವರ್ತಿಸಿರುವ ವ್ಯಾಪಾರಿಗಳು ಈ ಧೋರಣೆಗೆ ಮತ್ತು ಅತಿಕ್ರಮಣಕ್ಕೆ ಸ್ಥಳೀಯಾಡಳಿತ ಕಣ್ಣು ಮುಚ್ಚಿ ಕುಳಿತಿದೆ. ಇದರಲ್ಲಿ ಕೂಗಳತೆಯ ದೂರದಲ್ಲಿರುವ ಪುತ್ತೂರು ನಗರ ಸಭೆ, ಪೋಲೀಸ್ ಇಲಾಖೆಯ ಬೇಜಾವಾಬ್ದಾರಿ ಎದ್ದು ಕಾಣಿಸುತ್ತಿದೆ, ಸರಕಾರಿ ಆಸ್ಪತ್ರೆಗೆ ಹೋಗುವ ರಸ್ತೆಗೇ ತರ್ಪಾಲ್ ಹಾಕಿ ಸಂಪೂರ್ಣ ರಸ್ತೆಯನ್ನೇ ಅತಿಕ್ರಮಿಸಿ ತನ್ನ ವ್ಯಾಪಾರಕ್ಕಾಗಿ ಸಾರ್ವಜನಿಕ ಸೊತ್ತು ಮತ್ತು ನೆಮ್ಮದಿಯನ್ನು ಹಾಳು ಮಾಡುವ ಈ ಬೀದಿಬದಿ ವ್ಯಾಪಾರಿಗಳಿಂದ ತುರ್ತು ಸೇವೆ ನೀಡುವ ಅಂಬ್ಯುಲೆನ್ಸ ವಾಹನ ಸಂಚಾರಕ್ಕೂ ತೊಡಕಾಗಿದೆ. ಜಿಲ್ಲಾಡಳಿತ ಅಥವಾ ಪೋಲಿಸ್ ಇಲಾಖೆ ತುರ್ತಾಗಿ ಈ ಕಡೆ ಗಮನ ಹರಿಸಬೇಕಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *