DAKSHINA KANNADA
ಸ್ಪೇಷಲ್ ಒಲಿಂಪಿಕ್ಸ್ ರಾಷ್ಟ್ರೀಯ ಸಾಧನೆಗೈದ ಕ್ರೀಡಾಪಟುಗಳಿಗೆ ಸಚಿವ ಖಾದರ್ ಸನ್ಮಾನ

ಮಂಗಳೂರು,ಜುಲೈ 15: ಇತ್ತಿಚೆಗೆ ಮಹಾರಾಷ್ಟ್ರದ ಕೋಲಾಪುರದಲ್ಲಿ ಜರುಗಿದ ಸ್ಪೇಷಲ್ ಒಲಿಂಪಿಕ್ಸ್ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ದೆಯಲ್ಲಿ ಭಾಗವಹಿಸಿ ಸಾಧನೆ ಮೆರೆದ ಮಂಗಳೂರಿನ 3 ಮಂದಿ ಕ್ರೀಡಾಪಟುಗಳಾದ ಅಭಿಲಾಷ್, ಆಸ್ಲಿ ಡಿಸೋಜಾ ಹಾಗು ಪ್ರಜ್ವಲ್ ಲೋಬೊ ಅವರನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ಮಂಗಳೂರಿನಲ್ಲಿ ಸನ್ಮಾನಿಸಿ ಅಭಿನಂದಿಸಿದರು. ಈ ಸಂದ
ರ್ಭದಲ್ಲಿ ಮಾತನಾಡಿದ ಸಚಿವ ಯು.ಟಿ. ಖಾದರ್ ಅವರು ಇಂತಹ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ರಾಜ್ಯ ಸರಕಾರ ಪ್ರೊತ್ಸಾಹಿಸುತ್ತಿದೆ. ಭಿನ್ನ ಸಾಮರ್ಥ್ಯದ ಕ್ರೀಡಾಪಟುಗಳಿಗೆ ಸಹಕಾರ ನೀಡಲು ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂದು ಕರೆ ನೀಡಿದರು. ಮಂಗಳೂರು ಮಹಾ ನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಅವರೂ ಸಾಧಕರನ್ನು ಅಭಿನಂದಿಸಿದರು. ಮಂಗಳೂರಿನ ಅಭಿಲಾಷ್,ಆಸ್ಲಿ ಡಿಸೋಜಾ ಹಾಗು ಪ್ರಜ್ವಲ್ ಲೋಬೊ ಪವರ್ ಲಿಫ್ಟಿಂಗ್ ಸ್ಪರ್ದೆಯಲ್ಲಿ 4 ಚಿನ್ನ,2 ಬೆಳ್ಳಿ ಪದಕ ಗೆದ್ದು ಸಾಧನೆ ಮೆರೆದಿದ್ದಾರೆ. 2019 ರಲ್ಲಿ ಅಬುದಾಬಿ ಯಲ್ಲಿ ನಡೆಯಲಿರುವ ವಿಶ್ವ ಸ್ಪೆಷಲ್ ಸಮ್ಮರ್ ಗೇಮ್ಸ್ ನಲ್ಲಿ ಭಾಗ ವಹಿಸುವ ಅರ್ಹತೆ ಪಡೆದಿದ್ದಾರೆ.