DAKSHINA KANNADA
ಸುಳ್ಳು ಕೇಸು ಹಾಕಿ ಹಿಂದೂ ನಾಯಕರನ್ನು ಬಂಧಿಸಿದರೆ ದಕ್ಷಿಣಕನ್ನಡ ಜಿಲ್ಲೆ ಬಂದ್ ಮಾಡಿ ಪ್ರತಿಭಟನೆ.. ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕ್ ಭಾಸ್ಕರ್ ಧರ್ಮಸ್ಥಳ ಎಚ್ಚರಿಕೆ.
ಆರ್.ಎಸ್.ಎಸ್ ಕಾರ್ಯಕರ್ತ ಶರತ್ ಮಡಿವಾಳ ಮೃತದೇಹದ ಮೆರವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದವರನ್ನು ಕೂಡಲೇ ಬಂಧಿಸಬೇಕು. ಕಲ್ಲು ತೂರಾಟದ ಹೆಸರಿನಲ್ಲಿ ಸುಳ್ಳು ಕೇಸು ದಾಖಲಿಸಿ ಹಿಂದೂ ನಾಯಕರನ್ನು ಬಂಧಿಸುವಂತಹ ಕೆಲಸದಲ್ಲಿ ರಾಜ್ಯ ಸರಕಾರ ಮುಂದುವರಿದದ್ದೇ ಆದಲ್ಲಿ ದಕ್ಷಿಣಕನ್ನಡ ಜಿಲ್ಲೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಭಜರಂಗದಳ ಪುತ್ತೂರು ಸಂಚಾಲಕ್ ಬಾಸ್ಕರ್ ಧರ್ಮಸ್ಥಳ ಸರಕಾರವನ್ನು ಎಚ್ಚರಿಸಿದ್ದಾರೆ. ಈಗಾಗಲೇ ಮಂಗಳೂರಿನ ಸುರತ್ಕಲ್ ನಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಸತ್ಯಜಿತ್ ಸುರತ್ಕಲ್ ಮನೆಗೆ ಮಧ್ಯರಾತ್ರಿಯಲ್ಲಿ ಮನೆಯಲ್ಲಿ ಮಹಿಳೆಯರೇ ಇರುವ ಸಂದರ್ಭದಲ್ಲಿ ಪೋಲೀಸರು ನುಗಿದ್ದು, ಇಂಥ ಘಟನೆ ಮತ್ತೆ ಮುಂದುವರಿದರೆ, ಮುಂದಿನ ಅಹಿತಕರ ಘಟನೆಗಳಿಗೆ ಸರಕಾರವೇ ನೇರ ಹೊಣೆಯಾಗಲಿದೆ ಎಂದರು.