Connect with us

LATEST NEWS

ಸುಳ್ಯದ ಬಿಜೆಪಿಯ ಮಾಜಿ ಶಾಸಕ ಬಾಕಿಲ ಹುಕ್ರಪ್ಪ ನಿಧನ

ಸುಳ್ಯದ ಬಿಜೆಪಿಯ ಮಾಜಿ ಶಾಸಕ ಬಾಕಿಲ ಹುಕ್ರಪ್ಪ ನಿಧನ

ಮಂಗಳೂರು ನವೆಂಬರ್ 20: ಸುಳ್ಯದ ಮಾಜಿ ಶಾಸಕ ಬಾಕಿಲ ಹುಕ್ರಪ್ಪ ನಿಧನ ಹೊಂದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಕೊನೆ ಉಸಿರೆಳೆದರು. 1983 ರಿಂದ‌ 1985ರ ತನಕ ಸುಳ್ಯದ ಬಿಜೆಪಿಯ ಶಾಸಕರಾಗಿ ಆಯ್ಕೆಯಾಗಿದ್ದರು ಬಾಕಿಲ ಹುಕ್ರಪ್ಪ.

1983ರ ಸಂದರ್ಭದಲ್ಲಿ ಅಂದಿನ ಜನತಾ ಪಕ್ಷದಿಂದ ಹೊರ ಬಂದು ಅಟಲ್ ಬಿಹಾರಿ ವಾಜಪೇಯಿ ರಚಿಸಿದ ಬಿಜೆಪಿಯ ಜೊತೆಗೆ ಬಂದ ಬಾಕಿಲ ಹುಕ್ರಪ್ಪರಿಗೆ 1983ರ ಜನವರಿ 26 ರಂದು ಘೋಷಣೆಯಾದ ಚುನಾವಣೆಗೆ ಸುಳ್ಯ ಕ್ಷೇತ್ರದ ಅಭ್ಯರ್ಥಿಯಾಗುವ ಅವಕಾಶ ದೊರೆಯಿತು. ಚುನಾವಣೆಯಲ್ಲಿ 6975 ಮತಗಳ ಅಂತರದಿಂದ ಕಾಂಗ್ರೇಸ್ ಎನ್. ಶೀನಾ ಅವರ ವಿರುದ್ದ ಗೆದ್ದು ಬಂದಿದ್ದರು.

ಕೇವಲ 18 ತಿಂಗಳುಗಳ ಕಾಲ ಶಾಸಕರಾಗಿದ್ದ ಇವರು ಸಿಕ್ಕಿದ ಅಲ್ಪ ವರ್ಷಗಳ ಅವಧಿಯಲ್ಲಿ ಹಲವು ಜನಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನಾನುರಾಗಿಯಾಗಿದ್ದರು. ನಂತರ ನಡೆಯ ಚುನಾವಣೆಯಲ್ಲಿ ಬಾಕಿಲ ಹುಕ್ರಪ್ಪ ಅವರಿಗೆ ಮತ್ತೆ ಗೆಲುವು ಸಾಧಿಸಲಾಗಲಿಲ್ಲ.
ಮಾಜಿ ಶಾಸಕರಾಗಿದ್ದ ಅವರು ಗದ್ದೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು, ರಬ್ಬರ್ ತೋಟಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿದು ಜೀವನ ಸಾಗಿಸುತ್ತಿದ್ದರು.

ಶಾಸಕರಾಗಿ ಆಯ್ಕೆಯಾದ ಬಳಿಕ ಇವರು ವಿವಿಧ ಜನಪರ ಕಾರ್ಯಗಳನ್ನು ಕ್ಷೇತ್ರದಲ್ಲಿ ಕೈಗೊಂಡಿದ್ದರು. ತನ್ನ ವೈಯುಕ್ತಿಕ ಬದುಕಿನಲ್ಲಿ ಹಣ, ಭ್ರಷ್ಟಾಚಾರದಿಂದ ದೂರ ಉಳಿದಿದ್ದರು, ಆಡ ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆಯಂತೆ ಬಾಕಿಲ ಹುಕ್ರಪ್ಪ ಸೇರದ ಪಕ್ಷವಿಲ್ಲ , ಕಮ್ಯುನಿಷ್ಟ ಪಕ್ಷವನ್ನು ಹೊರತು ಪಡಿಸಿ ಅವರು 7 ಪಕ್ಷಗಳಲ್ಲಿ ತನ್ನನ್ನು ಗುರುತಿಸಿಕೊಂಡಿದ್ದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *