Connect with us

LATEST NEWS

ಸುರಂಗ ಕೊರೆದು ಬ್ಯಾಂಕ್ ನ ಲಾಕರ್ ಲೂಟಿ

ಸುರಂಗ ಕೊರೆದು ಬ್ಯಾಂಕ್ ನ ಲಾಕರ್ ಲೂಟಿ

ಮುಂಬಯಿ ನವೆಂಬರ್ 15: ಸುರಂಗ ಕೊರೆದು ಬ್ಯಾಂಕ್ ನ ಲಾಕರ್ ಲೂಟಿ ಮಾಡಿದ ಘಟನೆ ಮುಂಬಯಿಯಲ್ಲಿ ನಡೆದಿದೆ. ಮುಂಬಿಯ ಜೂಯಿನಗರದ ಬ್ಯಾಂಕ್ ಆಫ್ ಬರೋಡ ಶಾಖೆಯಿಂದ ಕಳ್ಳರು ಸುರಂಗ ಕೊರೆದು ಲಾಕರ್ ಕೊಠಡಿಯಿಂದ ಲಕ್ಷಗಟ್ಟಲೆ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ದರೋಡೆ ಮಾಡಿದ್ದಾರೆ.

ಗ್ರಾಹಕರೊಬ್ಬರು ಲಾಕರ್ ಕೊಠಡಿಗೆ ಹೋದಾಗಲೇ ಈ ದರೋಡೆಯಾಗಿರುವ ವಿಷಯ ಗಮನಕ್ಕೆ ಬಂದಿದೆ. ಪಕ್ಕದ ಅಂಗಡಿಯಿಂದ ಬ್ಯಾಂಕಿನ ಲಾಕರ್ ಕೊಠಡಿಗೆ ಸುರಂಗ ಕೊರೆದು 27 ಲಾಕರ್ಗಳನ್ನು ಮುರಿದು ದರೋಡೆ ಮಾಡಲಾಗಿದೆ. ಈ ಕೃತ್ಯ ಯಾವ ಸಮಯದಲ್ಲಿ ನಡೆದಿದೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ. ಲಾಕರ್ ಗಳಿಂದ ಯಾವ ವಸ್ತುಗಳು ಕಳವಾಗಿದೆ ಎನ್ನುವುದು ತಿಳಿದು ಬಂದಿಲ್ಲ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *