LATEST NEWS
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಡೆ ಸ್ನಾನ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಡೆ ಸ್ನಾನ
ಮಂಗಳೂರು ನವೆಂಬರ್ 23:ದೇಶದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಟಿಯ ಪ್ರಯುಕ್ತ ನಡೆಯುವ ವಿಶೇಷ ಸೇವೆಯಾದ ಎಡೆಸ್ನಾನವು ಇಂದು ನಡೆಯಿತು. ಇಂದು ನಡೆದ ಎಡೆಸ್ನಾನದಲ್ಲಿ 100 ಕ್ಕೂ ಮಿಕ್ಕಿದ ಭಕ್ತಾಧಿಗಳು ತಮ್ಮ ಹರಕೆಯನ್ನು ತೀರಿಸಿದರು.
ದಕ್ಷಿಣಭಾರತದ ಹೆಸರಾತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಮಣ್ಯದಲ್ಲಿ ನಡೆದುಕೊಂಡು ಬಂದಿರುವ ಮಡೆ ಮಡೆಸ್ನಾನದ ಬದಲು ಇದೀಗ ಕ್ಷೇತ್ರದಲ್ಲಿ ಎಡೆಸ್ನಾನವನ್ನು ನಡೆಸಲಾಗುತ್ತಿದೆ.
ಚಂಪಾಷಷ್ಟಿಯ ಮೂರು ದಿನಗಳಲ್ಲೂ ಈ ಸೇವೆಯನ್ನು ನಡೆಸಲಾಗುತ್ತಿದೆ. ಧಾರ್ಮಿಕಧತ್ತಿ ಇಲಾಖೆಯ ಆಗಮ ಪಂಡಿತರ ನೇತೃತ್ವದಲ್ಲಿ ಈ ಸೇವೆಯನ್ನು ನಡೆಸಲಾಗಿದೆ. ದೇವಳದ ಪ್ರಾಂಗಣದಲ್ಲಿ ಭಕ್ತರು ದೇವರ ನೈವೇದ್ಯ ದ ಮೇಲೆ ಉರುಳು ಸೇವೆ ಮಾಡಿದರು.
ನೈವೇದ್ಯ ವನ್ನು ಗೋವಿಗೆ ತಿನ್ನಿಸುವ ಮೂಲಕ ಚಾಲನೆ ನೀಡಲಾಯಿತು. ಆಗಮ ಪಂಡಿತರ ಮಾರ್ಗದರ್ಶನದಲ್ಲಿ ನಡೆದ ಈ ಎಡೆ ಮಡಸ್ನಾನ ನೂರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡರು.