Connect with us

    LATEST NEWS

    ಓದಿರುವವರು ಸಾಮಾಜಿಕ ಗಲಭೆಗಳಲ್ಲಿ ಪಾಲ್ಗೊಂಡ ನಿದರ್ಶನಗಳಿಲ್ಲ – ಕೋಟ ಶ್ರೀನಿವಾಸ ಪೂಜಾರಿ

    ಓದಿರುವವರು ಸಾಮಾಜಿಕ ಗಲಭೆಗಳಲ್ಲಿ ಪಾಲ್ಗೊಂಡ ನಿದರ್ಶನಗಳಿಲ್ಲ – ಕೋಟ ಶ್ರೀನಿವಾಸ ಪೂಜಾರಿ

    ಉಡುಪಿ, ನವೆಂಬರ್ 18: ಉತ್ತಮ ಸಮಾಜ ನಿರ್ಮಾಣಕ್ಕೆ ಓದು ಪೂರಕ. ಓದಿರುವವರು ಸಾಮಾಜಿಕ ಗಲಭೆಗಳಲ್ಲಿ ಪಾಲ್ಗೊಂಡ ನಿದರ್ಶನಗಳಿಲ್ಲ ಎಂದು ವಿಧಾನ ಪರಿಷತ್ ಶಾಸಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

    ಅವರಿಂದು ಬ್ರಹ್ಮಾವರದ ಹಂದಾಡಿ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಉಡುಪಿ ಆಯೋಜಿಸಿದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2017 ಹಾಗೂ ಸಿಬ್ಬಂದಿ ಹಾಗೂ ಮೇಲ್ವಿಚಾರಕರಿಗೆ ಸೇವಾ ಪುರಸ್ಕಾರ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

    ಗಲಾಟೆಗೆ ಪೂರಕವಾಗಿರದ ಓದಿಗೆ ವ್ಯಕ್ತಿಯನ್ನು ರೂಪಿಸುವ ಶಕ್ತಿಯಿದೆ. ಓದುವಿಕೆ ನಮ್ಮ ಜ್ಞಾನವನ್ನು ಹೆಚ್ಚಿಸುವುದಲ್ಲದೆ ವ್ಯಕ್ತಿತ್ವ ಬದಲಾವಣೆಗೆ ಕಾರಣವಾಗುತ್ತದೆ ಎಂದ ಅವರು, ಉತ್ತಮ ಸಾಮಾಜಿಕ ವ್ಯವಸ್ಥೆಗೂ ಓದು ಕಾರಣವಾಗಿರುತ್ತದೆ ಎಂದರು.

    ಇದಕ್ಕೂ ಮೊದಲು ‘ಓದಿನೆಡೆಗೆ ನಮ್ಮ ನಡಿಗೆ- ಎಸ್ ಎಂ ಎಸ್ ಬ್ರಹ್ಮಾವರದ ಶಾಲಾ ವಿದ್ಯಾರ್ಥಿಗಳಿಂದ ಜಾಥಾವನ್ನು ಆಯೋಜಿಸಲಾಗಿತ್ತು. ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಚಾಲನೆ ನೀಡಿ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿದರು. ಪುಸ್ತಕ ಓದಿ ಉತ್ತರಿಸಿದ ವಿದ್ಯಾರ್ಥಿಗಳು ಬಹುಮಾನವನ್ನು ವಿತರಿಸಲಾಯಿತು. ಚಂದ್ರಶೇಖರ ಕೆದಿಲಾಯ ಅವರಿಂದ ಕನ್ನಡ ಗೀತೆಗಳ ಸುಗಮ ಸಂಗೀತ ಕಾರ್ಯಕ್ರಮವೂ ನಡೆಯಿತು.

    Share Information
    Advertisement
    Click to comment

    Leave a Reply

    Your email address will not be published. Required fields are marked *