Connect with us

DAKSHINA KANNADA

ಶ್ರೀಗಂಧ ಮರ ಕಳವು : ಕಟೀಲ್ ಗೆ ರೈ ಟಾಂಗ್

ಮಂಗಳೂರು,ಆಗಸ್ಟ್ 29 : ಶ್ರೀಗಂಧ ಮರ ಕಳವು ಪ್ರಕರಣಕ್ಕೆ ಕಟೀಲ್ ಗೆ ರೈ ಟಾಂಗ್  ನೀಡಿದ್ದಾರೆ. ಮಂಗಳೂರಿನ ಐಜಿ ಬಂಗ್ಲೆಯಿಂದ ಶ್ರೀಗಂಧ ಕಳವು ಪ್ರಕರಣ ಸಂಬಂಧ ಸಂಸದ ಕಟೀಲ್ ಹೇಳಿಕೆಗೆ ಸಚಿವ ರಮಾನಾಥ ರೈ ತಿರುಗೇಟು ನೀಡಿದ್ದಾರೆ. ಐಜಿ ಬಂಗ್ಲೆಯಲ್ಲಿನ ಗಂಧವನ್ನು ರಮಾನಾಥ ರೈ ಮನೆಗೆ ಒಯ್ದಿರಬಹುದು ಎಂದಿದ್ದ ಸಂಸದ ನಳಿನ್ ಗೆ, ಸುದ್ದಿಗೋಷ್ಟಿಯಲ್ಲಿ ಅರಣ್ಯ ಸಚಿವರು ತಿರುಗೇಟು ನೀಡಿದ್ದಾರೆ. ಲೊಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ನಷ್ಟು ಮೂರ್ಖನಲ್ಲ ನಾನು. ಅವ ಹಾಗೆ ಹೇಳಬಹುದು, ನಾನು ಅಷ್ಟು ಕೆಳಮಟ್ಟಕ್ಕೆ ಇಳಿಯಲ್ಲ. ನನ್ನ ಮನೆ ದೂರ ಇದೆ, ಅವನ ಮನೆ ಐಜಿ ಬಂಗ್ಲೆ ಹತ್ತಿರ ಇದೆ. ನಾನು ಹೇಗೆ ಮರ ಕದ್ದುಕೊಂಡು ಹೋಗಲು ಸಾಧ್ಯ ಎಂದು ಅರಣ್ಯ ಸಚಿವರು ವಿಡಂಬನೆಯ ಮಾತುಗಳನ್ನು ಆಡಿದರು.
ಇತ್ತಿಚೆಗೆ ಪಶ್ಚಿಮ ವಲಯ ಐಜಿಪಿಯವರು ಇರುವ ಮಂಗಳೂರಿನ ಮೇರಿಹಿಲ್ ಐಜಿ ಬಂಗ್ಲೆಯಿಂದ, ಶ್ರೀಗಂಧದ ಮರವೊಂದು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಹಿರಿಯ ಪೋಲಿಸ್ ಅಧಿಕಾರಿಯ ಮನೆಯಿಂದಲೇ ಗಂಧದ ಮರ ಕಳವಾಗಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿರಾದ ರಮಾನಾಥ ರೈ ಅವರ ಕಾಲೇಳೆದ ಸಂಸದ ನಳಿನ್ ಕುಮಾರ್ ಕಟೀಲ್, ಈ ಶ್ರೀ ಗಂಧ ಮರದ ಕಳವಿನ ಹಿಂದೆ ರಮಾನಾಥ ರೈ ಕೈ ಇದೆ ಎಂದು ಲೇವಾಡಿ ಮಾಡಿದ್ದರು.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *