Connect with us

LATEST NEWS

ಶಿವಸೇನೆಯಿಂದ ಮುತಾಲಿಕ್ ಚುನಾವಣಾ ಕಣಕ್ಕೆ – ಬಿಜೆಪಿಗೆ ಸಂಕಷ್ಟ

ಶಿವಸೇನೆಯಿಂದ ಮುತಾಲಿಕ್ ಚುನಾವಣಾ ಕಣಕ್ಕೆ – ಬಿಜೆಪಿಗೆ ಸಂಕಷ್ಟ

ಬೆಂಗಳೂರು ನವೆಂಬರ್ 23: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆಯ ಮೂಲಕ ಸ್ಪರ್ಧಿಸಲು ಶ್ರೀರಾಮಸೇನೆಯ ಸಂಸ್ಥಾಪಕ ಹಾಗೂ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನಿರ್ಧರಿಸಿದ್ದಾರೆ. ಉತ್ತರ ಕರ್ನಾಟಕವನ್ನು ಕೇಂದ್ರವಾಗಿಟ್ಟುಕೊಂಡು ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು ಮತ್ತು ಮೈಸೂರು ಮೊದಲಾದ ಕಡೆಗಳಲ್ಲಿ ಒಟ್ಟು ನೂರು ಅಭ್ಯರ್ಥಿಗಳನ್ನು ಶಿವಸೇನೆ ಪಕ್ಷದಡಿ ಕಣಕ್ಕೆ ಇಳಿಸಲು ಶ್ರೀರಾಮಸೇನೆ ನಿರ್ಧರಿಸಿದೆ.

ಒಂದು ವೇಳೆ ಮುತಾಲಿಕರ ಅವರ ಈ ನಿರ್ಧಾರ ಕೈಗೂಡಿದರೆ ನೂರು ಅಭ್ಯರ್ಥಿಗಳು ಶಿವಸೇನೆ ಪಕ್ಷದಡಿ ಕಣಕ್ಕಿಳಿದರೆ ಇದು ಬಿಜೆಪಿಗೆ ಭಾರಿ ಹಿನ್ನಡೆ ತರುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯದ ಉತ್ತರ ಭಾಗ ಹಾಗೂ ಮುಂಬಯಿ ಕರ್ನಾಟಕ ಪ್ರಾಂತಗಳಲ್ಲಿ ಶಿವಸೇನೆಯನ್ನು ಬೆಂಬಲಿಸುತ್ತಿರುವವರು ಹಾಗೂ ಬಿಜೆಪಿ ಪಕ್ಷದಲ್ಲಿ ಶಿವಸೇನೆಯ ಒಲವಿರುವವರು ಹೆಚ್ಚಿನವರದ್ದು ಇದು ರಾಜ್ಯದಲ್ಲಿ ಬಿಜೆಪಿ ಮತಗಳು ವಿಭಜನೆಯಾಗುವ ಆತಂಕ ಎದುರಾಗಲಿದೆ.

2014ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿಗೆ ಪ್ರಮೋದ್ ಮುತಾಲಿಕ್ ಸೇರ್ಪಡೆಯಾಗಿದ್ದರು. ಆದರೆ ಪ್ರಮೋದ್ ಮುತಾಲಿಕ್ ಅವರ ಬಿಜೆಪಿ ಸೇರ್ಪಡೆ ನಡೆಯನ್ನು ಬಿಜೆಪಿ ಪಕ್ಷದವರೇ ತೀವ್ರವಾಗಿ ಟೀಕಿಸಿದ್ದರು. ಇದರಿಂದ ಬಿಜೆಪಿ ಕೇಂದ್ರ ಸಮಿತಿ ಪ್ರಮೋದ್ ಮುತಾಲಿಕ್ ಅವರ ಸದಸ್ಯತ್ವವನ್ನು ರದ್ದು ಮಾಡಿತ್ತು.

ಈ ಬಾರಿ ಕೂಡ ಪ್ರಮೋದ್ ಮುತಾಲಿಕ್ ಅವರು ಬಿಜೆಪಿ ಪಕ್ಷವನ್ನು ಸೇರುವ ಬಗ್ಗೆ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದರು ಆದರೆ ಇದಕ್ಕೆ ಬಿಜೆಪಿಯಲ್ಲಿ ಸಹಮತ ಬಾರದ್ದರಿಂದ ಇದೀಗ ತಮ್ಮ ನಿರ್ಧಾರವನ್ನು ಬದಲಾಯಿಸಿದ್ದು ಶಿವಸೇನೆಯ ಮೂಲಕ ನೇರವಾಗಿ ಚುನಾವಣಾ ಕಣಕ್ಕಿಳಿದು ಬಿಜೆಪಿಗೆ ತಕ್ಕ ಶಾಸ್ತಿ ನಡೆಸಬೇಕೆಂದು ತೀರ್ಮಾನಿಸಿದ್ದಾರೆ.

ಕಳೆದ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲು ಶಕ್ತಿ ಮೀರಿ ಪ್ರಯತ್ನಿಸಿರುವೆ. ಆದರೆ ಈಗ ಆದರೆ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರ ನೀಡಲು ಸಮಸ್ಯೆ ಇದೆ ಎನ್ನುತ್ತಿರುವ ಬಿಜೆಪಿ ಮುಖಂಡರಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *