LATEST NEWS
ಶಬರಿಮಲೆ ಭಕ್ತರ ಹತ್ಯೆಗೆ ಕೇರಳದಲ್ಲಿ ಉಗ್ರರ ಸ್ಲೀಪರ್ ಸೆಲ್

ಶಬರಿಮಲೆ ಭಕ್ತರ ಹತ್ಯೆಗೆ ಕೇರಳದಲ್ಲಿ ಉಗ್ರರ ಸ್ಲೀಪರ್ ಸೆಲ್
ಕೇರಳ, ನವೆಂಬರ್ 28: ಪ್ರತಿವರ್ಷ ಲಕ್ಷಾಂತರ ಜನ ಭಕ್ತಾಧಿಗಳು ಭೇಟಿ ನೀಡುವ ಶಬರಿಮಲೆ ಮೇಲೆ ಉಗ್ರರ ಕಣ್ಣು ಬಿದ್ದಿದೆ. ಐಸಿಸ್ ಸಂಘಟನೆಯ ಜೊತೆ ನಂಟು ಹೊಂದಿದ್ದಾರೆ ಎನ್ನಲಾದ ಉಗ್ರರು ಶಬರಿಮಲೆ ಅಯ್ಯಪ್ಪ ಭಕ್ತರನ್ನು ಹತ್ಯೆ ಮಾಡಲು ಹೊರಟಿದ್ದಾರೆ ಎಂಬ ಆತಂಕಕಾರಿ ವಿಚಾರ ಬಯಲಾಗಿದೆ. ಈ ನಡುವೆ ಕೇರಳದಲ್ಲಿರುವ ಉಗ್ರರ ಸ್ಲೀಪರ್ ಸೆಲ್ ಶಬರಿಮಲೆ ಭಕ್ತರ ಹತ್ಯೆ ನಡೆಸಲು ಆಕ್ಟಿವ್ ಆಗಿದ್ದಾರೆಂದು ಹೇಳಲಾಗಿದೆ.
ಈ ಸ್ಲೀಪರ್ ಸೆಲ್ ಗಳಿಗೆ ಕಾಸರಗೋಡಿನಿಂದ ಐಸಿಸ್ ಸೇರಿದ ರಶೀದ್ ಅಬ್ದುಲ್ಲಾ ಸಂದೇಶ ನೀಡಿರುವುದು ಸ್ಲೀಪರ್ ಸೆಲ್ ಗಳು ಸಕ್ರಿಯವಾಗಿರುವುದಕ್ಕೆ ಮತ್ತಷ್ಟು ಪುಷ್ಟಿ ನೀಡುತ್ತಿದೆ.

ಕೇರಳದಲ್ಲಿ ಐಸಿಸ್ ಈಗಗಾಲೇ ತನ್ನ ಪ್ರಾಬಲ್ಯವನ್ನು ಹೊಂದಿದ್ದು ಕೇರಳದಿಂದ ಐಸಿಸ್ ಸಂಘಟನೆಗೆ ಯುವಕರನ್ನು ಕೇರಳದಿಂದ ಆಯ್ಕೆ ಮಾಡಲಾಗುತ್ತಿದ್ದು ಈಗಾಗಲೇ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ವಿದೇಶದಿಂದ ಭಾರತದ ಮೇಲೆ ದಾಳಿ ನಡೆಸಲು ಐಸಿಸ್ ಯೋಜನೆ ರೂಪಿಸಿದ್ದು ಅದನ್ನು ಕಾರ್ಯಗತಗೊಳಿಸಲು ಈಗ ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ.
ಇತ್ತೀಚೆಗೆ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದ್ದ ಆಡಿಯೋ ತುಣುಕು ಐಸಿಸ್ ಉಗ್ರರ ಚಟುವಟಿಕೆಗಳಿಗೆ ಪುಷ್ಟಿ ನೀಡುತ್ತಿದೆ. ಲಕ್ಷಾಂತರ ಜನ ಸೇರುವ ಹಿಂದೂ ಧಾರ್ಮಿಕ ದೇವಾಲಯಗಳ ಮೇಲೆ ಒಂಟಿ ಉಗ್ರರಿಂದ ದಾಳಿ ನಡೆಸುವಂತೆ ಐಸಿಸ್ ಈಗಾಗಲೇ ಕೇರಳದಲ್ಲಿರುವ ಶಂಕಿತ ಉಗ್ರರಿಗೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.
ಆಹಾರದಲ್ಲಿ ವಿಷ ಬೇರೆಸುವುದು, ಜನನಿಬಿಡ ಪ್ರದೇಶಗಳಲ್ಲಿ ಟ್ರಕ್ ಚಲಾಯಿಸಿ ಜನರನ್ನು ಹತ್ಯೆ ಮಾಡುವಂತೆ ಸೂಚನೆ ನೀಡಿರುವುದು ಗುಪ್ತಚರ ಇಲಾಖೆಗೆ ಲಭ್ಯವಾದ ಆಡಿಯೋ ತುಣುಕಿನಲ್ಲಿದೆ. ಕಾಸರಗೋಡಿನಿಂದ ಅಫ್ಘಾನಿಸ್ಥಾನಕ್ಕೆ ತೆರಳಿ ಐಸಿಸ್ ಸೇರಿದ್ದಾನೆ ಎನ್ನಲಾದ ರಶೀದ್ ಅಬ್ದುಲ್ಲಾ ಕೇರಳದಲ್ಲಿನ ತನ್ನ ಸಹಚರರಿಗೆ ಈ ಸಂದೇಶ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ಶಬರಿಮಲೆ ಯಾತ್ರೆ ಪ್ರಾರಂಭಗೊಂಡಿದ್ದು ಶಬರಿಮಲೆ ಯಾತ್ರೆಗೆ ತೆರಳು ಭಕ್ತರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದ್ದಾರೆ. ಈ ನಡುವೆ ಉಗ್ರರ ಬೆದರಿಕೆ ಹಿನ್ನಲೆಯಲ್ಲಿ ಶಬರಿಮಲೆಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.