DAKSHINA KANNADA
ವಾರೀಸುದಾರರಿಲ್ಲದ ಮಕ್ಕಳ ಪತ್ತೆ, ಮಕ್ಕಳ ಕಲ್ಯಾಣ ಸಮಿತಿಯಿಂದ ವಿಚಾರಣೆ..
ಮಂಗಳೂರು,ಜುಲೈ22: ವಾರೀಸುದಾರರಿಲ್ಲದ 14 ಮಕ್ಕಳು ಇಂದು ಮಂಗಳೂರು ರೈಲು ನಿಲ್ದಾಣಕ್ಕೆ ಬಂದಿಳಿದಿದ್ದು, ಸುಮಾರು 7 ರಿಂದ 14 ವರ್ಷ ಪ್ರಾಯದ ಈ ಮಕ್ಕಳನ್ನು ಗುರುತಿಸಿದ ರೈಲ್ವೇ ಪೋಲೀಸು ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದ್ದಾರೆ. ಬಿಹಾರದಿಂದ ಮಂಗಳೂರಿಗೆ ಬಂದಿಳಿದಿದ್ದ ಈ ಮಕ್ಕಳು ಕೇರಳದ ಉದ್ಯಾವರದಲ್ಲಿರುವ ಮಸೀದಿಯಲ್ಲಿ ಶಿಕ್ಷಣಕ್ಕಾಗಿ ಬಂದಿರುವುದಾಗಿ ತಿಳಿದುಬಂದಿದೆ.
ಎಳೆಯ ಪ್ರಾಯದ ಮಕ್ಕಳನ್ನು ಪಾಲಕರು ಅಥವಾ ವಾರೀಸುದಾರರಿಲ್ಲದೆ ದೂರದ ಮಂಗಳೂರಿಗೆ ಕಳುಹಿಸಿರುವುದರ ಹಿನ್ನಲೆಯಲ್ಲಿ ಇದೊಂದು ಮಕ್ಕಳ ಕಳ್ಳಸಾಗಾಟದ ಜಾಲವಾಗಿರಬಹುದೇ ಎನ್ನುವ ಸಂಶಯವೂ ಹುಟ್ಟಿಕೊಂಡಿದೆ. ಇದೀಗ 14 ಮಕ್ಕಳೂ ಮಂಗಳೂರಿನ ಬೊಂದೆಲ್ ನಲ್ಲಿರುವ ಬಾಲ ಸಂರಕ್ಷಣಾ ಕೇಂದ್ರದಲ್ಲಿಡಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ.