Connect with us

LATEST NEWS

ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ವಯಸ್ಕರ ಚಿತ್ರ ನೋಡಿದ ಅನುಭವ ಹಂಚಿಕೊಂಡ ಗೋವಾ ಸಿಎಂ

ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ವಯಸ್ಕರ ಚಿತ್ರ ನೋಡಿದ ಅನುಭವ ಹಂಚಿಕೊಂಡ ಗೋವಾ ಸಿಎಂ

ಪಣಜಿ ನವೆಂಬರ್ 15:ಗೋವಾದಲ್ಲಿ ನಡೆದ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಾವು ಮೊದಲ ಬಾರಿಗೆ ವಯಸ್ಕರ ಚಿತ್ರವನ್ನು ನೋಡಿದ ಅನುಭವವನ್ನು ಮಕ್ಕಳೊಂದಿಗೆ ಹಂಚಿಕೊಂಡರು.

ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳೊಂದಿಗೆ ಸಂವಾದದಲ್ಲಿ ಗೋವಾ ಮುಖ್ಯಮಂತ್ರಿ ತೊಡಗಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ನೀವು ಯುವಕರಾಗಿದ್ದಾಗ ಯಾವ ತರಹದ ಸಿನಿಮಾಗಳನ್ನು ನೋಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಪರಿಕ್ಕರ್, ನಾನು ಯುವಕನಿದ್ದಾಗ ಕೇವಲ ಸಿನಿಮಾಗಳಲ್ಲ, ಅದರ ಜೊತೆಗೆ ವಯಸ್ಕರ ಚಿತ್ರಗಳನ್ನು ನೋಡುತ್ತಿದ್ದೆ ಎಂದು ಹೇಳಿದರು. ಆದರೆ ಈಗ ಕಾಲ ಬದಲಾಗಿದೆ. ಅಂದು ನಾವು ಏನು ವಯಸ್ಕರ ಚಿತ್ರಗಳು ಎಂದು ಕರೆಯಲ್ಪಡುತ್ತಿದ್ದ ಆ ಚಿತ್ರಗಳ ಹೆಚ್ಚಿನ ದೃಶ್ಯಗಳು ಈಗ ಟಿವಿಯಲ್ಲಿ ಪ್ರಸಾರವಾಗುತ್ತಿದೆ ಎಂದು ಉತ್ತರಿಸಿದರು.

ನಾನು ಯುವಕನಾಗಿದ್ದಾಗ ವಯಸ್ಕರ ಮೂವಿ ಒಂದು ಬಂದಿತ್ತು. ನಾನು ಮತ್ತು ನನ್ನ ಸಹೋದರ ಇಬ್ಬರೂ ಸಿನಿಮಾ ನೋಡಲು ಥಿಯೇಟರ್ ಗೆ ಹೋಗಿದ್ದೆವು. ಸಿನಿಮಾದಲ್ಲಿ ಇಂಟರ್ ವೆಲ್ ನಲ್ಲಿ ಥಿಯೇಟರ್ ಲೈಟ್ ಹಾಕಿದಾಗ, ಪಕ್ಕದಲ್ಲೇ ನಮ್ಮ ನೆರೆ ಮನೆಯ ವ್ಯಕ್ತಿಯೊಬ್ಬ ಕುಳಿತಿದ್ದ. ಆತನಿಗೆ ನಮ್ಮ ಪರಿಚಯವಿತ್ತು, ಇದನ್ನ ನೋಡಿದ ನಾವು ಸಿನಿಮಾವನ್ನು ಅರ್ಧಕ್ಕೆ ಬಿಟ್ಟು ಓಡಿ ಬಂದೆವು.
ನೆರಮನೆಯ ವ್ಯಕ್ತಿ ನಾವು ನೋಡಿದ ಸಿನೆಮಾದ ಬಗ್ಗೆ ಮನೆಯಲ್ಲಿ ಹೇಳಿದರೆ ಆ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಉಪಾಯ ಮಾಡಿಕೊಂಡು ಹೊರಟ ನಾವು, ಮನೆಗೆ ಬಂದ ಕೂಡಲೇ ಅಮ್ಮನಿಗೆ ಸಿನೆಮಾ ನೋಡಿದ ಬಗ್ಗೆ ತಿಳಿಸಿದೆವು. ಅಮ್ಮನಿಗೆ ನಾವು ನಮಗೆ ಅದು ಯಾವ ಸಿನಿಮಾ ಎಂದು ಗೊತ್ತಿರಲಿಲ್ಲ ಎಂದು ಹೇಳಿದೆವು. ಅಲ್ಲಿಗೆ ಹೋದ ಮೇಲೆ ಅದು ಕೆಟ್ಟ ಸಿನಿಮಾ ಎಂದು ಗೊತ್ತಾಯಿತು. ಕೂಡಲೇ ಚಿತ್ರ ನೋಡುವುದನ್ನು ಬಿಟ್ಟು ಅರ್ಧಕ್ಕೆ ಚಿತ್ರ ಮಂದಿರದಿಂದ ಹೊರ ಬಂದೆವು ಎಂದು ತಿಳಿಸಿದೆವು ಎಂದರು. ಹಾಗೂ ನೆರೆಮನೆಯವನು ಆ ಸಿನೆಮಾ ನೋಡಲು ಬಂದಿರುವುದಾಗಿ ತಿಳಿಸಿದೆವು ಎಂದರು.

ಮರುದಿನ ಆ ವ್ಯಕ್ತಿ ನಮ್ಮ ತಾಯಿಯನ್ನು ಕರೆದು ನಿಮ್ಮ ಮಕ್ಕಳಿಬ್ಬರು ಥಿಯೇಟರ್ ಗೆ ಬಂದಿದ್ದರು ಎಂದು ಹೇಳಿದರು. ಕೂಡಲೇ ನಮ್ಮ ತಾಯಿ ನನ್ನ ಮಕ್ಕಳು ಯಾವ ಸಿನಿಮಾಗೆ ಹೋಗಿದ್ದರು ಎಂದು ನನಗೆ ಗೊತ್ತಿದೆ. ಆದರೆ ನೀವ್ಯಾಕೆ ಅಂತಹ ಸಿನಿಮಾ ನೋಡಲು ಹೋಗಿದ್ರಿ ಎಂದು ಮರು ಪ್ರಶ್ನೆ ಮಾಡಿದರು. ನಾವು ಮೊದಲೇ ಎಲ್ಲವನ್ನು ಪ್ಲಾನ್ ಮಾಡಿದ್ದರಿಂದ ನಾವು ಬಚಾವ್ ಆಗಿದ್ದೆವು ಎಂದು ಹೇಳಿ ಪರಿಕ್ಕರ್ ನಕ್ಕರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *