LATEST NEWS
ತುಳುನಾಡ ಮೂಡೆಗೆ ಮನಸೋತ ಮೋದಿ

ತುಳುನಾಡ ಮೂಡೆಗೆ ಮನಸೋತ ಮೋದಿ
ಮಂಗಳೂರು,ಡಿಸೆಂಬರ್ 19 :ನಿನ್ನೆ ತಡರಾತ್ರಿ ಮಂಗಳೂರಿಗೆ ಅಗಮಿಸಿ ನಗರದ ಸರ್ಕಿಟ್ ಹೌಸಿನಲ್ಲಿ ತಂಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಬೆಳಗ್ಗೆ ಮಂಗಳೂರಿನಿಂದ ಲಕ್ಷ ದ್ವೀಪದತ್ತ ತನ್ನ ಪ್ರಯಾಣ ಬೆಳೆಸಿದರು.
ಸರ್ಕಿಟ್ ಹೌಸಿನಿಂದ ವಿಮಾನ ನಿಲ್ದಾಣದ ವರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.

ವಿಶೇಷ ಭದ್ರತೆಯೊಂದಿಗೆ ಸರ್ಕಿಟ್ ಹೌಸಿನಿಂದ ಮಂಗಳೂರು ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಗಮಿಸಿದ ನರೇಂದ್ರ ಮೋದಿ ಅವರು ವಿಶೇಷ ಹೆಲಿಕಾಪ್ಟರ್ ಮೂಲಕ ಲಕ್ಷದ್ವೀಪದತ್ತ ಪ್ರಯಾಣ ಬೆಳೆಸಿದರು.
ಮಾನ್ಯ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರ್, ಮೋನಪ್ಪ ಭಂಡಾರಿ, ಯೋಗೀಶ್ ಭಟ್ ಹಾಗೂ ಅನೇಕ ಬಿಜೆಪಿ ಮುಖಂಡರುಗಳು ಬಜ್ಪೆ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮಂತ್ರಿ ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.
ಓಖಿ ಚಂಡಮಾರುತದಿಂದ ತತ್ತರಿಸಿರುವ ಲಕ್ಷ ದ್ವೀಪದಲ್ಲಿ ಪ್ರಧಾನ ಮಂತ್ರಿಗಳು ಅನಾಹುತ ವೀಕ್ಷಣೆ ಮಾಡಲಿದ್ದಾರೆ.
ಮಂಗಳೂರಿನ ಖಾದ್ಯಕ್ಕೆ ಮನ ಸೋತ ನಮೋ ..:
ಮಂಗಳೂರಿನ ಕರಾವಳಿಯ ಖಾದ್ಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನ ಸೋತಿದ್ದಾರೆ.
ಇಂದು ಸರ್ಕಿಟ್ ಹೌಸಿನಲ್ಲಿ ಬೆಳಗ್ಗಿನ ಉಪಹಾರಕ್ಕೆ ಕರಾವಳಿಯ ತಿಂಡಿಗಳನ್ನು ಸವಿದ ಪ್ರಧಾನಿ ನರೇಂದ್ರ ಮೋದಿ ಅವರು ತಿಂಡಿ ಬಡಿಸಿದವರಿಗೆ ಪ್ರಶಂಸನೆಯ ಮಾತುಗಳನ್ನು ಆಡಿದರು.
ಕಡುಬಿನ ರುಚಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ನಮೋ ಕರಾವಳಿ ಪರಾಂಪರಿಕ ತಿಂಡಿಗಳಾದ ನೀರುದೋಸೆ,ಕಡುಬು,ಅವಲಕ್ಕಿ ಉಪ್ಪಿಟ್ಟು ಸವಿದ ಮೋದಿ ಉಪಹಾರದ ಬಳಿಕ ಫಲಹಾರ ಸಿದ್ದ ಪಡಿಸಿದ ಹೊಟೇಲ್ ಸಿಬ್ಬಂದಿ ಜೊತೆ ಪೋಟೋ ತೆಗಿಸಿಕೊಂಡರು.
ನಗರದ ಖ್ಯಾತ ಹೋಟೆಲ್ ಗಳಲ್ಲಿ ಒಂದಾದ ಓಷಿಯನ್ ಪರ್ಲ್ ಹೋಟೆಲ್ ನಿಂದ ಪ್ರಧಾನ ಮಂತ್ರಿಯವರಿಗೆ ಉಪಹಾರದ ಸಿದ್ಧತೆಯನ್ನು ಮಾಡಲಾಗಿತ್ತು.