LATEST NEWS
ರಾಮ ಮಂದಿರ ರವಿಶಂಕರ್ ಗೂರೂಜಿ ಮಧ್ಯಸ್ಥಿಕೆ ಬಗ್ಗೆ ಧರ್ಮಸಂಸದ್ ನಲ್ಲಿ ವಿರೋಧ
ರಾಮಮಂದಿರ ರವಿಶಂಕರ್ ಗೂರೂಜಿ ಮಧ್ಯಸ್ಥಿಕೆ ಬಗ್ಗೆ ಧರ್ಮಸಂಸದ್ ನಲ್ಲಿ ವಿರೋಧ
ಉಡುಪಿ ನವೆಂಬರ್ 24: ಉಡುಪಿಯಲ್ಲಿ ನಡೆಯುತ್ತಿರುವ ಧರ್ಮಸಂಸದ್ ನಲ್ಲಿ ಅಯೋಧ್ಯೆಯ ರಾಮಮಂದಿರ ವಿಚಾರ ಪ್ರತಿಧ್ವನಿಸಿದೆ. ಈ ಬಗ್ಗೆ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಚಂಪತ್ ರಾಯ್ ಧರ್ಮಸಂಸದ್ ನ ಚರ್ಚಾ ಗೋಷ್ಠಿಯಲ್ಲಿ ಮಾತನಾಡಿದ ಪ್ರತಿ ಸಾಧುಗಳು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲೆ ಮಂದಿರ ನಿರ್ಮಿಸಿ ದೇವರಿಗೆ ಅರ್ಪಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಪೇಜಾವರ ಶ್ರೀಗಳ 2019ಕ್ಕೆ ಶ್ರೀರಾಮಮಂದಿರ ನಿರ್ಮಾಣವಾಗುವುದೆಂದು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್ ಕಾನೂನು ಅಡಿಯಲ್ಲಿಯೇ ನಿರ್ಣಯ ಕೈಗೊಳ್ಳಬೇಕು ಎಂದು ಸಂಪತ್ ರಾಯ್ ಆಗ್ರಹಿಸಿದರು. ಕೋಟ್ಯಾಂತರ ಜನರಗೆ ತೋರಿಸಿದ ರೀತಿಯಲ್ಲೇ ರಾಮಮಂದಿರ ನಿರ್ಮಾಣವಾಗುತ್ತದೆ ಎಂದು ಹೇಳಿದ ಅವರು ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ ಎಂದು ಸಾಧುಗಳು ಅಂತಿಮ ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗೂರೂಜಿ ಅಯೋಧ್ಯೆಯ ಮಧ್ಯಸ್ಥಿಕೆ ಬಗ್ಗೆ ಇಂದು ನಡೆದ ಧರ್ಮಸಂಸದ್ ನ ಚರ್ಚಾಗೋಷ್ಠಿಯಲ್ಲಿ ಅಪಸ್ವರ ಎದ್ದಿದೆ. ಅಲ್ಲದೆ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಪತ್ ರಾಯ್ ರವಿಶಂಕರ್ ಗುರೂಜಿ ಸ್ವಯಂ ಪ್ರೇರಿತರಾಗಿ ರಾಮ ಭೂಮಿ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸಿದ್ದಾರೆ. ಇದರಲ್ಲಿ ವಿಶ್ವ ಹಿಂದೂ ಪರಿಷತ್ ನ ಪ್ರಭಾವ ಯಾವ ರೀತಿಯಲ್ಲೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಆಯೋಧ್ಯೆಯಲ್ಲಿಯೇ ರಾಮಮಂದಿರ ನಿರ್ಮಾಣ ಹೊರತು ಪಡಿಸಿ ವಿಹಿಂಪ ಯಾವುದೇ ವಿಚಾರದಲ್ಲಿ ರಾಜಿಯಿಲ್ಲ ಎಂದು ಹೇಳಿದ ಅವರು ರವಿಶಂಕರ ಗುರೂಜಿ ಯಾವುದೇ ಪರಿಹಾರ ಸೂತ್ರ ಕಂಡುಕೊಂಡರೂ ಅದನ್ನು ಸರಕಾರಕ್ಕೆ ಸಲ್ಲಿಸಬೇಕು ಇದು ಎರಡು ಸಮುದಾಯಗಳ ವಿಚಾರ ಎಂದು ತಿಳಿಸಿದರು, ನಮ್ಮ ಉದ್ದೇಶ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಸ್ವಲ್ಪ ನೀವು ಹಿಂದೆ ಹೋಗಿ ಸ್ವಲ್ಪ ನಾವು ಹೋಗುತ್ತೇವೆಂದಿಲ್ಲ ಅಲ್ಲದೆ ನಾವು ಹಿಂದೆ ಹೋಗುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.