LATEST NEWS
ರಾಜ್ಯ ಸರಕಾರ ಕರ್ನಾಟಕವನ್ನು ಸ್ಮಶಾನ ಮಾಡುತ್ತಿದೆ – ವಿಎಚ್ ಪಿ ಮುಖಂಡ ಗೋಪಾಲ್ ಜೀ

ರಾಜ್ಯ ಸರಕಾರ ಕರ್ನಾಟಕವನ್ನು ಸ್ಮಶಾನ ಮಾಡುತ್ತಿದೆ – ವಿಎಚ್ ಪಿ ಮುಖಂಡ ಗೋಪಾಲ್ ಜೀ
ಮಂಗಳೂರು ಜನವರಿ 4: ರಾಜ್ಯ ಸರಕಾರ ಕರ್ನಾಟಕವನ್ನು ಸ್ಮಶಾನವನ್ನಾಗಿ ಮಾಡುತ್ತಿದೆ ಎಂದು ವಿಎಚ್ ಪಿ ಮುಖಂಡ ಗೋಪಾಲ್ ಜೀ ಆರೋಪಿಸಿದ್ದಾರೆ.
ಸುರತ್ಕಲ್ ನ ಕಾಟಿಪಳ್ಳದಲ್ಲಿ ದೀಪಕ್ ಅವರ ಶವ ಇಟ್ಟು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯ ಸರಕಾರ ಪಿಎಫ್ ಐ ಮೇಲಿನ ಕೇಸ್ ಹಿಂತೆಗೆದುಕೊಂಡಿದ್ದರಿಂದ ಹಿಂದೂ ಕಾರ್ಯಕರ್ತರ ಕೊಲೆಗಳು ಜಾಸ್ತಿಯಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರಕಾರ ಕರ್ನಾಟಕವನ್ನು ಸ್ಮಶಾನ ಮಾಡಲು ಹೊರಟಿದೆ ಎಂದು ಅವರು ಹೇಳಿದರು.

ದೀಪಕ್ ಹತ್ಯೆಯಾಗಿ ಒಂದು ದಿನ ಕಳೆಯುತ್ತಿದ್ದರು, ಸರಕಾರದ ಯಾವುದೇ ಸಚಿವರು , ಮುಖ್ಯಮಂತ್ರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಆರೋಪಿಸಿದರು. ದೀಪಕ್ ರಾವ್ ಅವರ ಮನೆಯ ಆಧಾರ ಸ್ತಂಭವಾಗಿದ್ದರು, ಅವರ ಹತ್ಯೆಯಿಂದ ಅವರ ಕುಟುಂಬ ಅತಂತ್ರವಾಗಿದೆ ಎಂದು ಹೇಳಿದರು. ರಾಜ್ಯ ಸರಕಾರ ಕೂಡಲೇ ದೀಪಕ್ ರಾವ್ ಅವರ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರ ಈ ಕೂಡಲೇ PFI,SDPI ಸಂಘಟನೆಯನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿದ ಗೋಪಾಲ್ ಜೀ. ದೀಪಕ್ ರಾವ್ ಹತ್ಯೆ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ದೀಪಕ್ ಕೊಲೆ ಖಂಡಿಸಿ ನಾಳೆ ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ರಸ್ತೆ ತಡೆ ನಡೆಸಲಾಗುವುದು ಎಂದು ತಿಳಿಸಿದರು.