LATEST NEWS
ಒಳ್ಳೆಯ ಕೆಲಸ ಮಾಡಲು ಮುಂದಾದಾಗ ಸಂಕಷ್ಟ ತಪ್ಪಿದ್ದಲ್ಲ – ರಮೇಶ್ ಕುಮಾರ್

ಒಳ್ಳೆಯ ಕೆಲಸ ಮಾಡಲು ಮುಂದಾದಾಗ ಸಂಕಷ್ಟ ತಪ್ಪಿದ್ದಲ್ಲ – ರಮೇಶ್ ಕುಮಾರ್
ಉಡುಪಿ ನವೆಂಬರ್ 19: ಒಳ್ಳೆಯ ಕೆಲಸ ಮಾಡಲು ಮುಂದಾದಾಗ ಸಂಕಷ್ಟ ತಪ್ಪಿದ್ದಲ್ಲ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
ಇಂದು ಉಡುಪಿಯಲ್ಲಿ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ಬಂದಾಗ ಆರ್ಥಿಕ ದಿವಾಳಿತನವಾಗುತ್ತೆ, ಜನ ಸಾಮಾನ್ಯರು ಕೆಲಸ ಮಾಡದೆ ಉದಾಸೀನರಾಗುತ್ತಾರೆ ಎಂದು ಕೂಗಾಡಿದರು, ಆದರೆ ಆ ರೀತಿ ಯಾವುದೇ ಪರಿಸ್ಥಿತ ರಾಜ್ಯದಲ್ಲಿ ಉದ್ಬವವಾಗಲಿಲ್ಲ ಎಂದು ಹೇಳಿದರು.

ಅದೇ ರೀತಿ ವೈದ್ಯರ ಮುಷ್ಕರ ವಿಚಾರ ಕೂಡ ಮುಷ್ಕರ ಮಾಡುವವರಿಗೆ ಅವರ ಸಮಸ್ಯೆ ಇರುವುದು ನಿಜ ಆದರೆ ಚಿಕಿತ್ಸೆ ಪಡೆಯದೇ ಸತ್ತು ಹೋದವರ ಕೂಗು ಯಾರು ಕೇಳೋರು, ಚಿಕಿತ್ಸೆ ಪಡೆಯಲು ಆಸ್ತಿ ಮಾರಿದವರ ಕೂಗು ವೈದ್ಯರಿಗೆ ಕೇಳಿಸಲಿಲ್ಲವೇ, ಹೆಣ ಪಡೆಯಲು ಅದೆಷ್ಟೋ ಕುಟುಂಬಗಳು ಹೆಣಗಾಡಿದ್ದೂ ಇದೆ. ಈ ರೀತಿಯ ಪರಿಸ್ಥಿತಿಯನ್ನು ಅನುಭವಿಸಿದವರ ಅಭಿಪ್ರಾಯ ಪಡೆದು ಈ ಮಸೂದೆಗೆ ಮುಂದಾಗಿದ್ದೇವೆ ಎಂದರು.
ದೇವರಿಗೆ ಬೆಳ್ಳಿ ಕಿರೀಟ, ಹಾಲುತುಪ್ಪ ನೀಡಿದರೆ ದೇವರು ಮೆಚ್ಚಲ್ಲ, ಅದರ ಬದಲು ಬಡವರ ಸೇವೆಗೈದಾಗ ದೇವರು ಮೆಚ್ಚುತ್ತಾನೆ ಎಂದು ಹೇಳಿದರು. ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಖಾಸಗೀಕರಣ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಆಸ್ಪತ್ರೆ ವಿರೋಧಿಸುವವರು ವಿರೋಧಿಸಲಿ ಹೆದರಬೇಕಿಲ್ಲ. ಸೂರ್ಯ ಚಂದ್ರರಿರುವರೆಗೂ ಕೂಸಮ್ಮ ಶಂಭು ಶೆಟ್ಟಿ ಆಸ್ಪತ್ರೆ ಇರುತ್ತದೆ ಎಂದು ಹೇಳಿದರು.