LATEST NEWS
ಮೋದಿ ರಾಜ್ಯ ಭೇಟಿಯಿಂದ ಕಾಂಗ್ರೆಸ್ ಗಡಗಡ : ಸಂಜೀವ ಮಠಂದೂರು
ಮೋದಿ ರಾಜ್ಯ ಭೇಟಿಯಿಂದ ಕಾಂಗ್ರೆಸ್ ಗಡಗಡ : ಸಂಜೀವ ಮಠಂದೂರು
ಮಂಗಳೂರು, ಡಿಸೆಂಬರ್ 21: ಮೋದಿ ರಾಜ್ಯ ಭೇಟಿಯಿಂದ ಕಾಂಗ್ರೆಸ್ಸಿಗೆ ನಡುಕ ಉಂಟಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ನೀಡಿದ ಭೇಟಿಯಿಂದ ಕಂಗೆಟ್ಟ ಕಾಂಗ್ರೆಸ್ ಎಸ್ ಡಿಪಿಐ, ಪಿಎಫ್ ಐ ನೊಂದಿಗೆ ಕೈ ಜೋಡಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಮುಂಬರುವ ರಾಜ್ಯ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಕಾಂಗ್ರೆಸ್ ಇಂತಹ ಹೀನಾಯ ಸ್ಥಿತಿಗೆ ಇಳಿದಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಮತೀಯ ಸಂಘರ್ಷಗಳು ಕಾಂಗ್ರೆಸ್ ನ ತುಷ್ಟೀರಕಣ ನೀತಿಯಿಂದಾಗುತ್ತಿದೆ ಎಂದು ಆರೋಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ, ಜೀ ಹುಜೂರು ಎನ್ನುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.
ಸುರತ್ಕಲಿನಲ್ಲಿ ಶ್ರೀಧರ ಮೂರ್ತಿ ಎನ್ನುವ ಇನ್ಸ್ ಪೆಕ್ಟರ್ ಶಾಸಕ ಮೊಯ್ದೀನ್ ಬಾವಾರನ್ನು ಸನ್ಮಾನ ಮಾಡಿದ್ದಾರೆ.
ಇದು ನೋಡಿದರೆ ಜಿಲ್ಲಾ ಪೊಲೀಸರ ಸ್ಥಿತಿ ಎಲ್ಲಿಯವರೆಗೆ ತಲುಪಿದೆ ಎಂಬುವುದು ಸ್ಪಷ್ಟವಾಗಿ ಕಾಣುತ್ತದೆ ಎಂದರು.
ವಾಮಂಜೂರು ಪಿಲಿಕುಳ ರಸ್ತೆ ಕಾಮಗಾರಿಗೆ ಸಚಿವ ಸೀತಾರಾಂ ಚಾಲನೆ ನೀಡಿದ್ದರು ಆದರೆ, ಸರ್ಕಾರದ ಈ ಕಾರ್ಯಕ್ರಮಕ್ಕೆ ಸ್ಥಳೀಯ ಪಾಲಿಕೆ ಸದಸ್ಯೆ ಹೇಮಲತಾರನ್ನು ಆಹ್ವಾನಿಸಿಲ್ಲ.
ಇದರಿಂದ ಆಕ್ರೋಶ ಗೊಂಡ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಆದರೆ ಈ ವೇಳೆ ಪೊಲೀಸರ ಬೈಗುಳ ಕಂಡರೆ ಕೊಳಚೆಗಿಂತ ಕಡಿಮೆಯಿರಲಿಲ್ಲ. ಇದಕ್ಕೆಲ್ಲ ಸ್ಥಳೀಯ ಶಾಸಕರ ಕುಮ್ಮಕ್ಕು ಕಾರಣ ಎಂದು ಅರೋಪಿಸಿದರು.