DAKSHINA KANNADA
ಮಾನಸಿಕ ಖಿನ್ನತೆ, ಪೋಲಿಸ್ ಅಧಿಕಾರಿ ಆಸ್ಪತ್ರೆಗೆ

ಸುಳ್ಯ, ಜುಲೈ 26 : ಖಿನ್ನತೆಗೊಳಗಾದ ಅಧಿಕಾರಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದು, ಜಿಲ್ಲಾ ಗುಪ್ತವಾರ್ತಾ ವಿಭಾಗದ ಇನ್ಸಪೆಕ್ಟರ್ ಬಿ. ಕೃಷ್ಣಯ್ಯ ಇದೀಗ ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲಸದ ಒತ್ತಡದಿಂದಾಗಿ ತೀವೃ ಖಿನ್ನತೆಗೊಳಗಾಗಿದ್ದ ಕೃಷ್ಣಯ್ಯಯನ್ನು ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಸಮಾಧಾನಪಡಿಸಿದ್ದಾರೆ. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅಹಿತಕರ ಘಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಗುಪ್ತವಾರ್ತಾ ವಿಭಾಗವು ಸರಿಯಾದ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವ ಆರೋಪದ ಹಿನ್ನಲೆಯಲ್ಲಿ ಕೃಷ್ಣಯ್ಯ ಅವರನ್ನು ಹಿರಿಯ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಸುಳ್ಯ ಸರ್ಕಲ್ ಇನ್ಸಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಯ್ಯ ಅವರನ್ನು ಇತ್ತೀಚೆಗೆ ಜಿಲ್ಲಾ ಗುಪ್ತವಾರ್ತಾ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.