Connect with us

DAKSHINA KANNADA

“ಮನೆಯಿಂದ ಹೊರಗೆ ಬನ್ನಿ” ಯಶಸ್ವಿ ಮಾನವ ಸರಪಳಿ ಕಾರ್ಯಕ್ರಮ

ಮಂಗಳೂರು, ಆಗಸ್ಟ್ 26:ದೇಶದಾದ್ಯಂತ ಮುಸ್ಲಿಮರ, ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ಗುಂಪು ಹಿಂಸಾ ಹತೈಯನ್ನು ವಿರೋಧಿಸಿ ಆಗಸ್ಟ್ 25 ಶುಕ್ರವಾರದಂದು“ಮನೆಯಿಂದ ಹೊರಗೆ ಬನ್ನಿ” ಎಂಬ ಘೋಷಣೆಯೊಂದಿಗೆ ರಾಷ್ಟ್ರಾದ್ಯಂತ ಏಕ ಕಾಲಕ್ಕೆ ಹಮ್ಮಿಕೊಂಡಿರುವ ಮಾನವ ಸರಪಳಿ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಮಿಕ್ಕಿ ಜನ ಬೆಂಬಲದೊಂದಿಗೆ ಯಶಸ್ವಿಯಾಗಿ ನಡೆಯಿತು.ಜಿಲ್ಲಾದ್ಯಂತ 43 ಕಡೆಗಳಲ್ಲಿ ಸಾವಿರಾರು ಜನ ಸೇರಿದ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾದ್ಯಂತ ಪ್ರಮುಖ ಮಸೀದಿಗಳ ಮುಂಭಾಗದಲ್ಲಿ, ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಪಟ್ಟಣ,ನಗರ ಪ್ರದೇಶಗಳಲ್ಲಿ ಎಲ್ಲಾ ಸಾರ್ವಜನಿಕರು ಒಟ್ಟಾಗಿ ಮಾನವ ಸರಪಳಿ ರಚಿಸುವ ಮೂಲಕ ಗುಂಪು ಹಿಂಸೆಯ ವಿರುದ್ಧ ಐಕ್ಯ ಮತವನ್ನು ಪ್ರದರ್ಶಿಸಲಾಯಿತು.
20ನಿಮಿಷಗಳ ಕಾಲ ನಡೆದ ಮಾನವ ಸರಪಳಿಯ ಮೂಲಕ ಮಾನವೀಯತೆಗಾಗಿ ಒಂದಾಗೋಣ, ಗುಂಪು ಹತೈಯನ್ನು ಕೊನೆಗೊಳಿಸೋಣ, ಅಮಾಯಕರ ಜೀವವನ್ನು ರಕ್ಷಿಸೋಣ, ನ್ಯಾಯಾಲಯಗಳ ಕಣ್ಣು ತೆರೆಸೋಣ, ಗೋ ರಾಜಕೀಯವನ್ನು ತಡೆಯೋಣ ಮತ್ತು ಕಾನೂನು ಪಾಲಕರ ಕರ್ತವ್ಯವನ್ನು ನೆನಪಿಸೋಣ ಎಂಬಿತ್ಯಾದಿ ಭಿತ್ತಿಪತ್ರಗಳನ್ನು ಹಿಡಿದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಮಾನವ ಸರಪಳಿಯಲ್ಲಿ ಭಾಗವಹಿಸಿದ ಜನರು ಗುಂಪು ಹಿಂಸೆಯಿಂದ ಹತೈಯಾದ ಅಮಾಯಕರ ಚಿತ್ರಗಳ ಮುಖವಾಡವನ್ನು ಧರಿಸಿ ಅವರ ಹತೈಯನ್ನು ಮರೆಯುವುದಿಲ್ಲ ಎಂಬ ವಿಚಾರವನ್ನು ಪ್ರದರ್ಶಿಸುವುದರ ಮೂಲಕ ಹಿಂಸಾ ಕೃತ್ಯಕ್ಕೆ ಬಲಿಯಾದವರಿಗೆ ನ್ಯಾಯ ಸಿಗಲು ಜಾಗೃತಿಯನ್ನು ಮೂಡಿಸಿದರು.
ನಡೆದಿದ್ದು,ಸಂಘಟನಾತೀತವಾಗಿ,ಪಕ್ಷಾತೀತವಾಗಿ ನಡೆದ ಈ ವಿಭಿನ್ನ ಕಾರ್ಯಕ್ರಮಕ್ಕೆ ಎಲ್ಲಾ ಕಡೆಗಳಲ್ಲಿ ವ್ಯಾಪಕ ಜನ ಬೆಂಬಲ ಸಿಕ್ಕಿರುವುದರಿಂದ ಜನರಲ್ಲಿ ಸಂವಿಧಾನ ಬದ್ಧವಾದ ಪ್ರತಿರೋಧ ಶಕ್ತಿ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಯಿತು ಹಾಗೂ ಗುಂಪು ಹಿಂಸೆಯ ಮೂಲಕ ಭಾರತೀಯರನ್ನು ಹತೈಗೈಯುವ ಸಂಘಪರಿವಾರದ ಗೋರಕ್ಷಕರಿಗೆ ಎಚ್ಚರಿಕೆಯ ಪ್ರತಿರೋಧದ ಶಕ್ತಿ ತೋರಿಸುವುದರಲ್ಲಿಯು ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಯಾಯಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *