DAKSHINA KANNADA
ಮಂಗಳೂರು ವಿ.ವಿ ಪಠ್ಯ ವಿವಾದ, ಪುಸ್ತಕ ಸಮಿತಿ ಸಮರ್ಥನೆ, ಬಾಲ ಮುದುಡಿ ಕುಳಿತ ದೇಶಭಕ್ತರು…..
ಮಂಗಳೂರು, ಅಗಸ್ಟ್ 11: ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಂಗ ವಿಭಾಗ ಪ್ರಸಕ್ತ ಸಾಲಿನ ಪ್ರಥಮ ಬಿ.ಸಿ.ಎ ಕನ್ನಡ ಪಠ್ಯಪುಸ್ತಕದಲ್ಲಿ ಸೈನಿಕರ ವಿರುದ್ಧ ಅವಹೇಳನಕಾರಿ ಅಂಶಗಳು ಪ್ರಕಟಿಸಿರುವುದನ್ನು ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ಡಾ. ನಾಗಪ್ಪ ಗೌಡ ಸಮರ್ಥಿಸಿಕೊಂಡಿದ್ದಾರೆ. ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದಿರುವ ಈ ಲೇಖನವನ್ನು ಮಂಗಳೂರು ವಿ.ವಿ. ಪ್ರಸಾರಾಂಗ ವಿಭಾಗ ಅವರ ಅನುಮತಿಯಿಲ್ಲದೆಯೇ ಪ್ರಕಟಿಸಿರುವ ವಿಚಾರವನ್ನು ಸ್ವತಹ ಬರಗೂರು ರಾಮಚಂದ್ರಪ್ಪರೇ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ತನ್ನ ಲೇಖನದಲ್ಲಿ ಸೈನಿಕರ ವಿರುದ್ಧ ಬರೆದ ವಿಚಾರಗಳ ಬಗ್ಗೆ ಕ್ಷಮೆಯನ್ನೂ ಕೇಳಿದ್ದರು.
ಆದರೆ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ಡಾ.ನಾಗಪ್ಪ ಗೌಡ ಪತ್ರಿಕೆಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಪಠ್ಯ ಪುಸ್ತಕ ಸಮಿತಿಯ ಮುಂದೆ ಚರ್ಚೆ ನಡೆಸಿಯೇ ಬರಗೂರು ರಾಮಚಂದ್ರಪ್ಪ ಬರೆದ ‘ಯುದ್ಧ ಒಂದು ವ್ಯಾಪಾರ’ ಲೇಖನವನ್ನು ಪ್ರಥಮ ಬಿ.ಸಿ.ಎ ಕನ್ನಡ ಪಠ್ಯಪುಸ್ತಕದಲ್ಲಿ ಪ್ರಕಟಿಸಲಾಗಿದ್ದು, ಇದರಲ್ಲಿ ಯೋಧರಿಗೆ ಅವಮಾನ ಮಾಡುವ ಯಾವುದೇ ವಿಚಾರವಿಲ್ಲ ಎನ್ನುವ ರೀತಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ. ಆದರೆ ಡಾ.ನಾಗಪ್ಪ ಗೌಡರಿಗೆ ಲೇಖನದ ಆರಂಭದಲ್ಲೇ ಸೈನಿಕರನ್ನು ಅವಮಾನ ಮಾಡಿದ ವಿಚಾರ ತಿಳಿಯವಷ್ಟು ಬುದ್ಧಿಮತ್ತೆಯಿಲ್ಲವೇ ಎನ್ನುವ ಸಂಶಯ ಕಾಡತೊಡಗಿದೆ.
ಸ್ವತಹ ಲೇಖಕರೇ ತನ್ನ ಬರಹದ ಬಗ್ಗೆ ಕ್ಷಮೆ ಕೇಳಿರುವಾಗ ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷರು ಇದನ್ನು ಸಮರ್ಥಿಸಿಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ. ಕಾಲೇಜಿನಲ್ಲಿ ಓದುತ್ತಿರುವ ಮಕ್ಕಳಿಗೆ ಇಂಥಹ ವಿವಾದಿತ ಲೇಖನವನ್ನು ಪಠ್ಯಪುಸ್ತಕದಲ್ಲಿ ಪ್ರಕಟಿಸಿದರೂ, ದೇಶಪ್ರೇಮಿಗಳ ಪಕ್ಷವೆಂದು ತನ್ನನ್ನು ಕರೆಸಿಕೊಳ್ಳುತ್ತಿರುವ ಬಿಜೆಪಿ, ಹಾಗೂ ಕೆಲವು ದೇಶಭಕ್ತ ಸಂಘಟನೆಗಳು ಬಾಲ ಮುದುಡಿ ಕುಳಿತಿರುವುದು ಮಾತ್ರ ವಿಪರ್ಯಾಸ. ಸೈನಿಕರ ಬಗ್ಗೆ ಪ್ರಕಟಿಸಿದ ಈ ಲೇಖನವನ್ನು ಪಠ್ಯ ಪುಸ್ತಕದಿಂದ ತೆಗೆಯುವಂತೆ ಅಥವಾ ಅದನ್ನು ವಿದ್ಯಾರ್ಥಿಗಳಿಗೆ ಕಲಿಸದಂತೆ ಕನಿಷ್ಟ ಒತ್ತಡ ಹೇರುವ ಪ್ರಯತ್ನವನ್ನೂ ಈ ಸೋ ಕಾಲ್ಡ್ ದೇಶಪ್ರೇಮಿ ಪಕ್ಷ ಹಾಗೂ ಸಂಘಟನೆಗಳು ಮಾಡದಿರುವುದು ಇವುಗಳ ದೇಶಭಕ್ತಿಯನ್ನು ಪ್ರಶ್ನಿಸುವಂತೆ ಮಾಡಿದೆ.