LATEST NEWS
ಪರೇಶ್ ಮೇಸ್ತ ಕುಟುಂಬಕ್ಕೆ ನ್ಯಾಯ ದೊರೆಯದಿದ್ದಲ್ಲಿ ಮಂಗಳೂರು ಬಂದ್ -ಶರಣ್ ಪಂಪ್ ವೆಲ್
ಪರೇಶ್ ಮೇಸ್ತ ಕುಟುಂಬಕ್ಕೆ ನ್ಯಾಯ ದೊರೆಯದಿದ್ದಲ್ಲಿ ಮಂಗಳೂರು ಬಂದ್ -ಶರಣ್ ಪಂಪ್ ವೆಲ್
ಮಂಗಳೂರು ಡಿಸೆಂಬರ್ 13: ಹೊನ್ನಾವರದಲ್ಲಿ ಡಿಸೆಂಬರ್ 6 ರಂದು ನಡೆದ ಪರೇಶ್ ಮೆಸ್ತ ಕೊಲೆ ಪ್ರಕರಣ ವನ್ನು ಖಂಡಿಸಿ ಇಂದು ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಹಾಗು ಬಜರಂಗದಳ ಪ್ರತಿಭಟನಾ ಸಭೆ ಹಮ್ಮಿಕೊಂಡಿತ್ತು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಪ್ರತಿಭಟನಾಕಾರರು ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿದರು.
ಕಳೆದ 5 ವರ್ಷದಲ್ಲಿ 19 ಹಿಂದೂ ಯುವಕರ ಹತ್ಯೆಯಾಗಿವೆ. ಹಿಂದೂ ಸಂಘಟನೆಗಳ ವಿರುದ್ದ ಕೋಮುವಾದ ಎಂಬ ಶಬ್ದ ಬಳಸಲಾಗುತ್ತಿದೆ. ಇಂದು ರಾಜ್ಯದಲ್ಲಿ ಕೇವಲ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ದೂರಿದ ಅವರು ಗೌರಿ ಲಂಕೇಶ್ ಹತ್ಯೆಯಾದಾಗ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಮುಸ್ಲಿಮರ ಸಾವಾದರೆ ಎಲ್ಲಾ ಭಾಗ್ಯಗಳ ಸೌಲಭ್ಯ ಒದಗಿಸಲಾಗುತ್ತದೆ. ಆದರೆ, ಪರೇಶ್ ಮೆಸ್ತ ಹತ್ಯೆಯಾದಾಗ ರಾಜ್ಯ ಸರಕಾರದ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದರು.
ಹೊನ್ನಾವರದಲ್ಲಿ ಮುಸ್ಲಿಂ ಗೂಂಡಾಗಳು ಬೀದಿ ದೀಪ ಆಫ್ ಮಾಡಿ ಮಾರುಕಟ್ಟೆ ಹುಡಿಮಾಡಿದ್ದರು. ಈ ಸಂದರ್ಭದಲ್ಲಿಯೇ ಅಮಾಯಕ ಪರೇಶ್ ಮೇಸ್ತನನ್ನೂ ಅವರು ಹತ್ಯೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಪರೇಶ್ ಗೆ ನ್ಯಾಯಕ್ಕಾಗಿ ಶಿರಸಿ, ಹೊನ್ನಾವರದಲ್ಲಿ ಬಂದ್ ನಡೆಸಲಾಗಿತ್ತು. ಪರೇಶ್ ಮೆಸ್ತ ಅವರ ಕುಟುಂಬಕ್ಕೆ ನ್ಯಾಯ ದೊರೆಯದಿದ್ದಲ್ಲಿ ಮಂಗಳೂರು ಬಂದ್ ನಡೆಸುತ್ತೇವೆ ಏಂದು ಅವರು ಎಚ್ಚರಿಸಿದರು. ರಾಜ್ಯ ಸರಕಾರ ಮೇಲೆ ಹಾಗು ಸರಕಾರ ನಡೆಸುವ ತನಿಖೆಯ ಮೇಲೆ ನಂಬಿಕೆಯಿಲ್ಲ ಎಂದು ಹೇಳಿದ ಅವರು ಅಂತಿಮ ವರದಿ ಬರುವ ಮುಂಚೆಯೇ ಸರಕಾರ ಪರೇಶ್ ಮೆಸ್ತ ಅವರದ್ದು ಸಹಜ ಸಾವು ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ನಡೆಸಲು ಎನ್ ಐಎಗೆ ವಹಿಸಬೇಕು ಎಂದು ಅವರು ಒತ್ತಾಯಿಸಿದರು.