DAKSHINA KANNADA
ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ 64 ಬೀಟುಗಳ ಸದಸ್ಯರ ಮಹಾಸಭೆ

ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ 64 ಬೀಟುಗಳ ಸದಸ್ಯರ ಮಹಾಸಭೆ ನಗರದ ರೊಸಾರಿಯೋ ಚರ್ಚ್ ಹಾಲ್ ನಲ್ಲಿ ನಡೆಯಿತು. ಸುಮಾರು 650 ಮಂದಿ ಬೀಟು ಸದಸ್ಯರು ಹಾಜರಿದ್ದರು. ನಗರ ಪೊಲೀಸ್ ಆಯುಕ್ತರಾದ ಶ್ರೀ ಟಿ ಆರ್ ಸುರೇಶ್, ಡಿಸಿಪಿ ಲಾ ಶ್ರೀ ಕೆ.ಎಂ ಶಾಂತರಾಜು ರವರು ಸುಧಾರಿತ ಬೀಟಿನ ಮಾಹಿತಿ ನೀಡಿದರು. ವ್ಯಾಪ್ತಿಯ ಕಾರ್ಪೋರೇಟರ್ ಗಳು, ಧಾರ್ಮಿಕ ಮುಖಂಡರು ಹಾಗೂ ದಕ್ಷಿಣ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು. ಪೊಲೀಸ್ ನಿರೀಕ್ಷಕರಾದ ಶ್ರೀ ಕೆ ಯು ಬೆಳ್ಳಿಯಪ್ಪರವರು ಪ್ರಾಸ್ತಾವಿಕ ಭಾಷಣ ಮಾಡಿದರು.