UDUPI
ಬೈಲೂರು ವಾರ್ಡ್ ನಲ್ಲಿ 4.22 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ: ಸಚಿವ ಪ್ರಮೋದ್
ಬೈಲೂರು ವಾರ್ಡ್ ನಲ್ಲಿ 4.22 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ: ಸಚಿವ ಪ್ರಮೋದ್
ಉಡುಪಿ, ಮಾರ್ಚ್ 17: ಉಡುಪಿ ನಗರಸಭಾ ವ್ಯಾಪ್ತಿಯ ಬೈಲೂರು ವಾರ್ಡ್ ನಲ್ಲಿ, ಮಿಷನ್ ಆಸ್ಪತ್ರೆಯಿಂದ – ಕೊರಂಗ್ರಪಾಡಿ ರಸ್ತೆವರೆಗೆ 4.22 ಕೋಟಿ ರೂ ವಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅವರು ಶನಿವಾರ, ನಗರಸಭೆಯ ಎಸ್.ಎಫ್.ಸಿ. ವಿಶೇಷ ಅನುದಾನ (ಉಳಿಕೆ) ಮತ್ತು ನಗರೋತ್ಥಾನ 3 ನೆ ಹಂತದ ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕೊಡವೂರು ವಾರ್ಡಿನ ಪಾಳೆಕಟ್ಟೆ ಬಾಚನ ಬೈಲು ನಲ್ಲಿ 10 ಲಕ್ಷ ರೂ ವಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣ ಮತ್ತು ಕಾಂಕ್ರೀಟ್ ಚರಂಡಿ ನಿರ್ಮಾಣ, ವಡಭಾಂಡೇಶ್ವರ ವಾರ್ಡಿನಲ್ಲಿ 15 ಲಕ್ಷ ರೂ ವಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣ, ಕೊಳ ಮುಖ್ಯರಸ್ತೆಯ ಉತ್ತರ ಬದಿಯಲ್ಲಿ 5 ಲಕ್ಷ ರೂ ವೆಚ್ಚದಲ್ಲಿ ಮಳೆನೀರು ಹರಿಯುವ ತೋಡಿಗೆ ಆರ್.ಸಿ.ಸಿ ಚರಂಡಿ ರಚನೆ. ಮುಂದುವರಿದ ಕಾಮಗಾರಿ, ಮಲ್ಪೆ ಸೆಂಟ್ರಲ್ ವಾರ್ಡಿನಲ್ಲಿ 10 ಲಕ್ಷ ರೂ ವಚ್ಚದಲ್ಲಿ ರಸ್ತೆ ಅಭಿವೃದ್ಧಿ, ಮಲ್ಪೆ ಸೆಂಟ್ರಲ್ ವಾರ್ಡಿನ ಬಾಪು ತೋಟ ಮುಖ್ಯ ರಸ್ತೆಗೆ ಸಂಪರ್ಕ ರಸ್ತೆ ಅಭಿವೃದ್ಧಿ 10 ಲಕ್ಷ ರೂ ವೆಚ್ಚ, ಕಲ್ಮಾಡಿ ವಾರ್ಡಿನಲ್ಲಿ 5 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ಧಿ, ಕೊಡಂಕೂರು ವಾರ್ಡಿನ ಪೇಟೆ ರಸ್ತೆ ಕಾಂಕ್ರೀಟಿಕರಣ 7.90 ಲಕ್ಷ ರೂ, ಸುಬ್ರಮಣ್ಯ ನಗರ ವಾರ್ಡಿನಲ್ಲಿ ರಸ್ತೆಗೆ ಕಾಂಕ್ರೀಟ್ ಚರಂಡಿ ರಚನೆ 5 ಲಕ್ಷ ರೂ, ಕಕ್ಕುಂಜೆ ವಾರ್ಡಿನಲ್ಲಿ ಮಳೆ ನೀರು ಹರಿಯುವ ಚರಂಡಿ ನಿರ್ಮಾಣ 8 ಲಕ್ಷ ರೂ, ಕಕ್ಕುಂಜೆ ವಾರ್ಡಿನ ನಾರಾಯಣ ನಗರ ಆಯ್ದ ಭಾಗಗಳಲ್ಲಿ ಕಾಂಕ್ರೀಟ್ ಚರಂಡಿ ಮತ್ತು ಪೇವರ್ ಫಿನಿಷ್ ಡಾಮರೀಕರಣ 8 ಲಕ್ಷ ರೂ, ಕರಂಬಳ್ಳಿ ವಾರ್ಡಿನಲ್ಲಿ ಚರಂಡಿ ನಿರ್ಮಾಣ 5 ಲಕ್ಷ ರೂ, ವಿವಿಧ ರಸ್ತೆ ಡಾಮರೀಕರಣ 10 ಲಕ್ಷ ರೂ, ಕಡಿಯಾಳಿ ವಾರ್ಡಿನಲ್ಲಿ ಚರಂಡಿ ನಿರ್ಮಾಣ 6.95 ಲಕ್ಷ ರೂ, ಕುಂಜಿಬೆಟ್ಟು ವಾರ್ಡಿನಲ್ಲಿ ರಸ್ತೆ ಕಾಂಕ್ರೀಟಿಕರಣ 5 ಲಕ್ಷ ರೂ, ಇಂದ್ರಾಳಿ ವಾರ್ಡಿನಲ್ಲಿ ರಸ್ತೆ ಅಭಿವೃದ್ದಿ 5 ಲಕ್ಷ ರೂ, ಒಳಕಾಡು ವಾರ್ಡಿನಲ್ಲಿ ರಸ್ತೆ ಕಾಮಗಾರಿ 5 ಲಕ್ಷ ರೂ, ಕಿನ್ನಿಮೂಲ್ಕಿ ವಾರ್ಡಿನಲ್ಲಿ ವಿವಿಧ ರಸ್ತೆಗೆ ಫೇವರ್ ಫಿನಿಷ್ ಡಾಮರೀಕರಣ 48 ಲಕ್ಷ ರೂ, ಅಂಬಲಪಾಡಿ ವಾರ್ಡಿನ ರಸ್ತೆ ಅಭಿವೃದ್ದಿ 5 ಲಕ್ಷ ರೂ, ರಸ್ತೆ ಡಾಮರೀಕರಣ 5 ಲಕ್ಷ ರೂ, ಬನ್ನಂಜೆ ವಾರ್ಡಿನಲ್ಲಿ ತಾಲೂಕು ಆಫೀಸಿನಿಂದ ಪ.ಜಾತಿ ಕಾಲನಿಗೆ ಹೋಗುವ ರಸ್ತೆ ಅಭಿವೃದ್ಧಿ 7.15 ಲಕ್ಷ ರೂ, ಅಜ್ಜರಕಾಡು ವಾರ್ಡಿನಲ್ಲಿ 5 ಲಕ್ಷ ರೂ ವೆಚ್ಚ ರಸ್ತೆ ಮತ್ತು ಡಾಮರೀಕರಣ ಸೇರಿದಂತೆ ಒಟ್ಟು 6.29 ಕೋಟಿ ರೂ ವೆಚ್ಚದ 30 ವಿವಿಧ ಕಾಮಗಾರಿಗಳಿಗೆ ಸಚಿವರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ , ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹಾರ್ಮಿಸ್ ನರೋನ್ಹಾ , ಪೌರಾಯುಕ್ತ ಮಂಜುನಾಥಯ್ಯ , ನಗರಸಭೆಯ ಸಹಾಯಕ ಇಂಜಿನಿಯರ್ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು