DAKSHINA KANNADA
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಾಧಿಗಳ ಲೂಟಿ – ಬಿಜೆಪಿ ಪ್ರತಿಭಟನೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಾಧಿಗಳ ಲೂಟಿ – ಬಿಜೆಪಿ ಪ್ರತಿಭಟನೆ
ಸುಬ್ರಹ್ಮಣ್ಯ ಡಿಸೆಂಬರ್ 25: ಸರ್ಪ ಸಂಸ್ಕಾರ ಸೇವೆಯ ಹೆಸರಿನಲ್ಲಿ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಾಧಿಗಳ ಲೂಟಿ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಸುಬ್ರಹ್ಮಣ್ಯ ದಲ್ಲಿ ಪ್ರತಿಭಟನೆ ನಡೆಸಿತು.
ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಸದಸ್ಯರೊಬ್ಬರು ಸರ್ಪ ಸಂಸ್ಕಾರ ಪೂಜೆ ನೆರವೇರಿಸುವುದಾಗಿ ದಳ್ಳಾಳಿತನ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು 3 ಸಾವಿರ ರೂಪಾಯಿಯಲ್ಲಿ ಆಗುವ ಸೇವೆಯನ್ನು ಭಕ್ತಾಧಿಗಳಿಂದ 7 ಸಾವಿರ ರೂಪಾಯಿ ದೋಚುತ್ತಿದ್ದಾರೆ.

ಈ ಕುರಿತು ಭಕ್ತಾಧಿಗಳು ಸದಸ್ಯನ ವಿರುದ್ಧ ದೂರನ್ನೂ ನೀಡಿದ್ದಾರೆ. ಆದರೆ ವ್ಯವಸ್ಥಾಪನಾ ಮಂಡಳಿ ಸದಸ್ಯನನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು. ಕೂಡಲೇ ಆರೋಪಿತ ಸದಸ್ಯನನ್ನು ವ್ಯವಸ್ಥಾಪನಾ ಮಂಡಳಿಯಿಂದ ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಲಾಯಿತು.
VIDEO