FILM
ಬಾಲ್ಡ್ ಅಂಡ್ ಬ್ಯೂಟಿಫುಲ್ ಒಂದು ಮೊಟ್ಟೆಯ ಕಥೆ..
ಬಕ್ಕ ತಲೆಯ ಕನ್ನಡದ ಪ್ರಾಧ್ಯಾಪಕನಾಗಿರುವ 28 ವರ್ಷದ ಜನಾರ್ದನ್ (ರಾಜ್ ಬಿ.ಶೆಟ್ಟಿ) ಕುಟುಂಬದವರೊಂದಿಗೆ ವಧು ಅನ್ವೇಷಣೆಯಲ್ಲಿ ನಿರತನಾಗಿರುತ್ತಾನೆ. ಒಂದೆಡೆ ‘ಮೊಟ್ಟೆ’ ಎಂಬ ಅಡ್ಡಹೆಸರು ಪಡೆದಿದ್ದ ಜನಾರ್ದನ್ ನ್ನು ಯುವತಿಯರು ವಿವಾಹವಾಗಲು ಒಪ್ಪುವುದಿಲ್ಲ. ಮತ್ತೊಂದೆಡೆ ಜನಾರ್ದನ್ ಸಹ ದಪ್ಪಗಿನ ಹುಡುಗಿಯರನ್ನು ಒಪ್ಪುವುದಿಲ್ಲ. ಈ ರೀತಿಯ ಮಾನವನ ಸಹಜ ಪ್ರವೃತ್ತಿಗಳನ್ನು ವಿಡಂಬನೆಯ ನಡುವೆ ಪರಿಶೋಧನೆಗೊಳಪಡಿಸಿರುವುದು ಹಾಗೂ ಅದನ್ನು ಸರಳ, ವ್ಯಂಗ್ಯ ಕಟ್ಟಿಕೊಟ್ಟಿರುವುದು ಸಿನಿಮಾದ ಹೆಗ್ಗಳಿಕೆ ಹಾಗೂ ಶಕ್ತಿಯಾಗಿದೆ.
ನಿರ್ದೇಶನದಲ್ಲಷ್ಟೇ ಅಲ್ಲದೇ ರಾಜ್.ಬಿ.ಶೆಟ್ಟಿ ಉತ್ತಮ ಪ್ರತಿಭೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದಾರೆ. ಶೈಲಶ್ರೀ, ಉಷಾ ಭಂಡಾರಿ, ಶ್ರೀನಿವಾಸ್ ಆಗಿ ಪ್ರಕಾಶ್ ಸೇರಿದಂತೆ ಎಲ್ಲ ಪಾತ್ರಧಾರಿಗಳು ಉತ್ತಮವಾಗಿ ಅಭಿನಯಿಸಿದ್ದು ರಾಜ್ ಶೆಟ್ಟಿಗೆ ಸಾಥ್ ನೀಡಿದ್ದಾರೆ. ಮುಕುಂದನ್ ಸಂಗೀತವೂ ಉತ್ತಮವಾಗಿದ್ದು, ಸಿನಿಮಾದ ಉದ್ದಕ್ಕೂ ಪ್ರೇಕ್ಷಕರಿಗೆ ಮನರಂಜನೆ ನೀಡುವ ಈ ಒಂದು ಮೊಟ್ಟೆಯ ಕಥೆ ಸಿದ್ಧ ಸೂತ್ರಗಳಿಗೆ ಸೆಡ್ಡು ಹೊಡೆದಿದ್ದು, ಬಾಲ್ಡ್ ಆಗಿದ್ದರೂ ಬ್ಯೂಟಿಫುಲ್ ಆಗಿದೆ ಎನ್ನಬಹುದು.