LATEST NEWS
ಬಸ್ ನಲ್ಲೊಂದು ಸೀಟಿಗಾಗಿ ಜಗಳ – ವೈರಲ್ ಆದ ವಿಡಿಯೋ

ಬಸ್ ನಲ್ಲೊಂದು ಸೀಟಿಗಾಗಿ ಜಗಳ – ವೈರಲ್ ಆದ ವಿಡಿಯೋ
ಮಂಗಳೂರು ನವೆಂಬರ್ 25: ಲೇಡಿಸ್ ಸೀಟ್ ನಲ್ಲಿ ಕುತಿರೋದಕ್ಕೆ ಮಹಿಳೆಯೋರ್ವಳು ಯುವಕನ ಕುತ್ತಿಗೆ ಪಟ್ಟಿ ಹಿಡಿದು ಎಬ್ಬಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಹೌಸ್ ಪುಲ್ ಆಗಿದ್ದ ಬಸ್ ನಲ್ಲಿ ಸೀಟು ಇಲ್ಲದೆ ಮಹಿಳೆಯರು ನಿಂತಿದ್ದರು, ಮಹಿಳೆಯರಿಗೆ ಮೀಸಲಾಗಿದ್ದ ಸೀಟ್ ನಲ್ಲಿ ಯುವಕನೋರ್ವ ಕುತ್ತಿದ್ದೆ ಈ ಗಲಾಟೆಗೆ ಕಾರಣವಾಗಿತ್ತು.
ಮಹಿಳೆಯರಿಗೆ ಮೀಸಲಿದ್ದ ಸೀಟನ್ನು ಬಿಟ್ಟು ಹಲವಾರು ಮಹಿಳೆಯರು ಇತರ ಸೀಟುಗಳಲ್ಲಿ ಕುಳಿತುಕೊಂಡಿದ್ದರು. ಅದನ್ನು ಪ್ರಶ್ನಿಸಿದ ಯುವಕ ನಾನು ಕುಳಿತ ಸೀಟಿನಿಂದ ಎದ್ದಿರಲಿಲ್ಲ. ಇತರ ಸೀಟಿನಲ್ಲಿ ಕುಳಿತುಕೊಂಡ ಮಹಿಳೆಯರು ಸಿಟ್ಟು ಬಿಟ್ಟು ಕೊಡುವಂತೆ ಯುವಕ ತಾಕೀತು ಮಾಡಿದ್ದಾನೆ. ಯುವಕನಿಗೆ ಬಸ್ಸಿನಲ್ಲಿದ್ದ ಇತರ ಪುರುಷರು ಸಾತ್ ನೀಡಿದ್ದಾರೆ.

ಯುವಕನ ಪ್ರಶ್ನೆಗೆ ಉತ್ತರಿಸಲಾಗದೇ ಮಹಿಳೆ ಏಕಾಏಕಿಯಾಗಿ ರೌದ್ರಾವತರ ತೋರಿದ್ದಾಳೆ. ಮಹಿಳೆಯ ವಿರುದ್ದ ಯುವಕನೂ ತಿರುಗಿಬಿದ್ದಿದ್ದು ಬಸ್ ನೊಳಗೆಯೇ ಇಬ್ಬರ ಕಚ್ಛಾಟ ನಡೆದಿದೆ. ಯುವಕನ ವಿರುದ್ದ ಕೋಪಗೊಂಡ ಮಹಿಳೆ ಯುವಕನ ಕುತ್ತಿಗೆಪಟ್ಟಿ ಹಿಡಿದು ಎಬ್ಬಿಸಿದ್ದಾರೆ. ಸೀಟಿಗಾಗಿ ಮಹಿಳೆಯ ಹೈಡ್ರಾಮ ಕಂಡು ದಂಗಾದ ಯುವಕ ಕೊನೆಗೆ ಗತಿಯಿಲ್ಲದೆ ಸೀಟು ಬಿಟ್ಟು ಎದ್ದು ಹೋಗಿದ್ದಾನೆ.
ಬಸ್ ನಲ್ಲಿದ್ದವರೆಲ್ಲಾ ಇಬ್ಬರ ರಂಪಾಟಕ್ಕೆ ಮೂಕ ಪ್ರೇಕ್ಷಕರಾಗಿದ್ದು,ಪುಕ್ಕಟೆ ಮನರಂಜನೆ ತೆಗೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸೀಟಿಗಾಗಿ ಜಗಳ ದ ವಿಡಿಯೋ ಸಖತ್ ವೈರಲ್ ಆಗಿದ್ದು ನ್ಯಾಯ, ಅನ್ಯಾಯ, ಹಕ್ಕು , ಸಮಾನತೆಗಳ ಬಗ್ಗೆ ಚರ್ಚೆ ಆರಂಭಗೊಂಡಿದೆ.