Connect with us

LATEST NEWS

ತಾಯಿ ಹಾಲು ಕುಡಿದಿದ್ದರೆ ಈ ರೀತಿ ಸಿನೆಮಾ ಮಾಡುತ್ತಿರಲ್ಲಿಲ – ಪ್ರವೀಣ್ ಬಾಯ್ ತೊಗಾಡಿಯಾ

ತಾಯಿ ಹಾಲು ಕುಡಿದಿದ್ದರೆ ಈ ರೀತಿ ಸಿನೆಮಾ ಮಾಡುತ್ತಿರಲ್ಲಿಲ – ಪ್ರವೀಣ್ ಬಾಯ್ ತೊಗಾಡಿಯಾ

ಉಡುಪಿ ನವೆಂಬರ್ 26: ಉಡುಪಿಯ ಧರ್ಮಸಂಸದ್ ನ ಕೊನೆಯ ದಿನ ನಡೆದ ವಿರಾಟ್ ಹಿಂದೂ ಸಮಾಜೋತ್ಸವ ನಡೆಯಿತು. ಸಮಾಜೋತ್ಸವದಲ್ಲಿ ಅಂದಾಜು 2 ಲಕ್ಷ ಜನ ಸೇರಿದ್ದರು. ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದ ವಿಎಚ್ ಪಿ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಬಾಯ್ ತೋಗಾಡಿಯಾ ಪದ್ಮಾವತಿ ಸಿನೆಮಾ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ದ ಹರಿಹಾಯ್ದರು.

ಪದ್ಮಾವತಿ ಸಿನೆಮಾ ಸಂಪೂರ್ಣ ನಿಷೇಧಿಸಬೇಕೆಂದು ಆಗ್ರಹಿಸಿದ ತೋಗಡಿಯಾ ಸಂಜಯ್ ಲೀಲಾ ಬನ್ಸಾಲಿ ತಾಯಿ ಹಾಲು ಕುಡಿದಿದ್ದರೆ ಈ ರೀತಿ ಸಿನೆಮಾ ಮಾಡುತ್ತಿರಲ್ಲಿಲ ಎಂದು ಆರೋಪಿಸಿದರು, ಬನ್ಸಾಲಿ ನೀನು ತಾಯಿ ಎದೆ ಹಾಲು ಕುಡಿದಿದ್ದೀಯಾ? ಅಥವಾ ಮಹಮ್ಮದನ ರಕ್ತ ಕುಡಿದಿದ್ದೀಯಾ? ಎಂದು ಪ್ರಶ್ನಿಸಿದರು. ಸಿನೆಮಾ ಮಾಡೊದಾದ್ರೆ ಪ್ರವಾದಿ ಮಹಮ್ಮದ್ ಕುರಿತಂತೆ ಸಿನೆಮಾ ಮಾಡು ಎಂದು ಸವಾಲು ಹಾಕಿದರು.

ರಾಮ ಮಂದಿರ ನಿರ್ಮಾಣ ವಿಚಾರವನ್ನು ಮಾತುಕತೆ ಮೂಲಕ ಬಗೆಹರಿಸಿ ಎಂದು ಹೇಳುತ್ತಾರೆ. ಅದರೆ ಮಾತುಕತೆ ನಡೆಸಲು ಮುಸ್ಲಿಂಮರು ತಯಾರಿಲ್ಲ ಎಂದ ತೋಗಾಡಿಯಾ ರಾಮ ಮಂದಿರ ಹಿಂದೂಗಳ ಭುಜದ ಶಕ್ತಿಯ ಆಧಾರದಲ್ಲಿ ಮಂದಿರ ಕಟ್ಟುತ್ತೇವೆ ಎಂದು ಹೇಳಿದರು.

ಹಿಂದೂಗಳ ಅಗ್ನಿ ಎದೆಯಲ್ಲಿ ಉರಿಯುತ್ತಿದೆ, ಭಾರತದ ದೇಶದ್ರೋಹಿ ಮುಸಲ್ಮಾನರನ್ನು ಅದು ಸುಡದೆ ಬಿಡದು ಎಂದು ತೊಗಾಡಿಯಾ ಹೇಳಿದರು. ಕೇವಲ ಅಯೋಧ್ಯೆಯಲ್ಲಿ ರಾಮ ಮಂದಿರ ಮಾತ್ರ ನನ್ನ ಕನಸು, ಅದು ಬಿಟ್ಟು ನನಗೆ ಸಚಿವ ಸ್ಥಾನ ಬೇಕಿಲ್ಲ, ನನಗೆ ಟಾಟಾ ಬಿರ್ಲಾ ತರ ಆಗಬೇಕಿಲ್ಲ ಎಂದರು.

ಆಯೋಧ್ಯೆಯಲ್ಲಿ ರಾಮ ಮಂದಿರಕ್ಕಾಗಿ ಹಿಂದೂಗಳ ಭುಜದ ಬಲ ತೊರಿಸಬೇಕಾ? ಅಯೋಧ್ಯೆಯಲ್ಲಿ ರಾಮ ಮಂದಿರ ಮಾತ್ರ ಆಗಬೇಕು ಬಾಬರ್ ಗೆ ಒಂದಿಂಚೂ ಜಾಗ ಕೊಡಲ್ಲ ಎಂದು ಹೇಳಿದರು. ಅಯೋಧ್ಯೆ ರಾಮನಿಗೆ ಸೇರಿದ್ದು ರಾಮನಿಗೊಂದು ಮನೆ ಕಟ್ಟಿ ಕೊಡಿ, ರಾಮನನ್ನು ಬೀದಿಯಿಂದ ಗುಡಿಗೆ ಕರೆತನ್ನಿ ಕರೆ ನೀಡಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *