Connect with us

DAKSHINA KANNADA

ಪ್ರಯಾಣಿಕನಲ್ಲೇ ಗುಂಡಿಗೆ ಆರ್ಡರ್ ಮಾಡಿದ KSRTC ಕಂಡಕ್ಟರ್

ಪ್ರಯಾಣಿಕನಲ್ಲೇ ಗುಂಡಿಗೆ ಆರ್ಡರ್ ಮಾಡಿದK S R TC  ಕಂಡಕ್ಟರ್

ಪುತ್ತೂರು, ಎಪ್ರಿಲ್ 27 : ಸರಕಾರಿ ಕೆಲಸದಲ್ಲಿರುವವರು ಸಾರ್ವಜನಿಕವಾಗಿ ತನ್ನ ಘನತೆ ಹಾಗೂ ಗೌರವ ಕಾಪಾಡಬೇಕಾಗಿರುವುದು ಅವರ ಕರ್ತವ್ಯ.

ಆದರೆ ಈ ಕರ್ತವ್ಯವನ್ನು ಮರೆತು ಜನಸಾಮಾನ್ಯನನ್ನು ತನ್ನ ಗುಲಾಮನಂತೆ ಕಾಣುವ ಸರಕಾರಿ ನೌಕರರು ಸಾಕಷ್ಟಿದ್ದಾರೆ.

ಇಂತಹುದೇ ಒಂದು ಘಟನೆ ಎಪ್ರಿಲ್ 26 ರಂದು ಉತ್ತರಕನ್ನಡ ಜಿಲ್ಲೆಯ ಕುಮುಟಾ ದಲ್ಲಿ ನಡೆದಿದೆ‌.

ತನ್ನ ಕಾರ್ಯ ನಿಮಿತ್ತ ಕುಂದಾಪುರದಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಂಬ್ರ KA.19F 3327 ಹತ್ತಿದ ಪ್ರಯಾಣಿಕರೊಬ್ಬರಿಗೆ ಇಂಥಹುದೇ ಅನುಭವವಾಗಿದೆ.

ಸುಳ್ಯ-ಸುಬ್ರಹ್ಮಣ್ಯ ಮಾರ್ಗದ ಮೂಲಕ ಗೋಕರ್ಣ ತೆರಳುವ ಈ ಬಸ್ ಎಪ್ರಿಲ್ 26 ರಾತ್ರಿ ಸುಮಾರು 9 ಗಂಟೆ ಹೊತ್ತಿಗೆ ಕುಮುಟಾ ತಲುಪಿದೆ.

ಈ ಸಂದರ್ಭದಲ್ಲಿ ಆ ಬಸ್ ಕಂಡಕ್ಟರ್ ಗೆ ಗುಂಡು ಹೊಡೆಯಬೇಕೆಂಬ ಮನಸಾಗಿತ್ತು.

ನೇರವಾಗಿ ಕುಂದಾಪುರದಿಂದ ಹತ್ತಿದ ಆ ಪ್ರಯಾಣಿಕನ ಬಳಿ ಬಂದ ಕಂಡಕ್ಟರ್ 100 ರೂಪಾಯಿ ನೋಟು ಕೊಟ್ಟು ಒಂದು ಕ್ವಾರ್ಟರ್ ಬಾಟಲಿ ತರುವಂತೆ ಆರ್ಡರ್ ಮಾಡಿದ್ದಾನೆ.

ಇದರಿಂದ ಒಮ್ಮೆಲೇ ತಬ್ಬಿಬ್ಬಾದ ಪ್ರಯಾಣಿಕ ಕಂಡಕ್ಟರ್ ಆರ್ಡರ್ ನಿರಾಕರಿಸಿದ್ದಾರೆ.

ಇದರಿಂದ ಕೆರಳಿದ ಕಂಡಕ್ಟರ್ ಪ್ರಯಾಣಿಕನಿಗೆ ದಮ್ಕಿಯನ್ನೂ ಹಾಕಿದ್ದಾನೆ.

ಈ ವಿಚಾರವನ್ನು ಮೇಲಾಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದಾಗಲೂ ಕ್ಯಾರೇ ಎನ್ನದ ಈ ಕಂಡಕ್ಟರ್ ಬಸ್ ಗೋಕರ್ಣ ತಲುಪಿದ ಬಳಿಕವೂ ಪ್ರಯಾಣಿಕನನ್ನು ನಿಂದಿಸಿದ್ದಾನೆ.

ಸಾರ್ವಜನಿಕವಾಗಿ ಸಭ್ಯತೆ ಕಾಯ್ದುಕೊಳ್ಳಬೇಕಾದ ಈ ಅಸಭ್ಯ ಕಂಡಕ್ಟರ್ ಮೇಲೆ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *