Connect with us

    DAKSHINA KANNADA

    ಪ್ರತಿ ಶನಿವಾರ “ಬ್ಯಾಗ್‌ರಹಿತ ದಿನ’ : ಮಣಭಾರದ ಬ್ಯಾಗಿನಿಂದ ಶಾಲ ಮಕ್ಕಳ ಮುಕ್ತಿ

    ಪ್ರತಿ ಶನಿವಾರ “ಬ್ಯಾಗ್‌ರಹಿತ ದಿನ’ : ಮಣಭಾರದ ಬ್ಯಾಗಿನಿಂದ ಶಾಲ ಮಕ್ಕಳ ಮುಕ್ತಿ

    ಮಂಗಳೂರು, ಡಿಸೆಂಬರ್ 23 : ಮಣಭಾರದ ಬ್ಯಾಗ್‌ ಹೊತ್ತು ಬೆನ್ನುಬಾಗಿಸಿ ಎವರೆಸ್ಟ್ ಪರ್ವತ ಏರಲು ಹೋಗುವ  ಪರ್ವತರೋಹಿಗಳಂತೆ ಶಾಲೆಗೆ ತೆರಳುವ ಮಕ್ಕಳಿಗೊಂದು ಇದೀಗ ಸಿಹಿಸುದ್ದಿಯೊಂದು ಬಂದಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಹೊಸ ವರ್ಷದ ಉಡುಗೊರೆಯಾಗಿ ಪ್ರತಿ ಶನಿವಾರ ವನ್ನು “ಬ್ಯಾಗ್‌ರಹಿತ ದಿನ’ವನ್ನಾಗಿ ಘೋಷಿಸಿದೆ. ಮಾತ್ರವಲ್ಲ ಇಂದಿನಿಂದಲೇ ಜಾರಿಗೆ ತಂದಿದೆ.

    ಮಕ್ಕಳು ಶಾಲೆಯ ಮೆಟ್ಟಿಲು ಏರುತ್ತಿದ್ದಂತೆ ಬ್ಯಾಗ್‌ ಹೊರೆಯೂ ಆರಂಭವಾಗುತ್ತದೆ.

    ಪಠ್ಯಪುಸ್ತಕಗಳು, ಬರೆಯುವ ಪುಸ್ತಕಗಳು, ಕಂಪಾಸ್‌ ಬಾಕ್ಸ್‌, ಊಟದ ಬುತ್ತಿ,  ನೀರಿನ ಬಾಟಲಿ ಇತ್ಯಾದಿ ತುಂಬಿದ ಶಾಲೆಚೀಲ ಮಣಭಾರ. ಕೆಲ ವೊಮ್ಮೆ ತಮ್ಮ ತೂಕಕ್ಕಿಂತಲೂ ಹೆಚ್ಚಿ ರುವ ಬ್ಯಾಗ್‌ ಹೊತ್ತು ಮಕ್ಕಳು ನಡೆಯಲು  ಬಹಳ ಕಷ್ಟಪಡಬೇಕಾಗುತ್ತದೆ.

    ಬೆನ್ನು ಬಾಗುತ್ತದೆ. ಪುಸ್ತಕಗಳ ಹೊರೆ ಯಿಂದಲೇ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುವ ಸಂದರ್ಭಗಳು ಅಥ ಹೆಚ್ಚು. ಇದಕ್ಕೆ ಪರಿಹಾರವಾಗಿ ಇಂದಿನಿಂದ “ಬ್ಯಾಗ್‌ ರಹಿತ ಶನಿವಾರ’ ಜಾರಿಯಾಗಿದೆ. 

     ಏನಿದು ಬ್ಯಾಗ್ ರಹಿತ ದಿನ: 

    ಶನಿವಾರ ವಿದ್ಯಾರ್ಥಿಗಳು ಬರಿಗೈಯಲ್ಲೇ ಶಾಲೆಗೆ ಬರುತ್ತಾರೆ. ಆದರೆ ಅಂದಿನ ವೇಳಾಪಟ್ಟಿಯಲ್ಲಿ ಬದಲಾವಣೆ ಇರುವುದಿಲ್ಲ.

    ಪಠ್ಯಪುಸ್ತಕ ಕೇಂದ್ರಿತ, ಪರೀಕ್ಷೆ ಸಂಬಂಧಿಯಾದ ಏಕರೂಪದ ಬೋಧನೆ -ಕಲಿಕೆ ವಿದ್ಯಾರ್ಥಿಗಳಲ್ಲೂ ನಿರಾಸಕ್ತಿ ಮೂಡಿಸುತ್ತದೆ. ಹೀಗಾಗಿ ಬ್ಯಾಗ್‌ ರಹಿತ ದಿನ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ.

    ಆದರೆ ಈ ಎಲ್ಲ ಪಠ್ಯೇತರ ಚಟುವಟಿಕೆಗಳು ಆಯಾ ಅವಧಿಯ ಪಠ್ಯಕ್ಕೆ ಪೂರಕವಾಗಿಯೇ ಇರುತ್ತವೆ.

    ಉದಾಹರಣೆಗೆ, ಕನ್ನಡ ಅವಧಿಯಲ್ಲಿ ಆಶು ಭಾಷಣ, ರಸಪ್ರಶ್ನೆ; ವಿಜ್ಞಾನ ಅವಧಿಯಲ್ಲಿ ರಂಗೋಲಿಯಲ್ಲಿ ವಿಜ್ಞಾನ ಚಿತ್ರ ರಚನೆ ಇತ್ಯಾದಿ.

    ಕಲಿಕೆಯ ಜತೆಗೆ ಆಯಾ ವಿಷಯದಲ್ಲಿ ಸೃಜನಶೀಲತೆ ಮೈಗೂಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಈ ಚಟುವಟಿಕೆಗಳು ಸಹಕಾರಿಯಾಗಲಿವೆ.

    ಆದಿನ ಶಾಲೆಯಲ್ಲಿನ ಚಟುವಟಿಕೆಗಳು ಏನು ?

    ರಸಪ್ರಶ್ನೆ, ಆಶು ಭಾಷಣ, ಅಣಕು ಸಂಸತ್ತು ನಿರ್ವಹಣೆ, ಚರ್ಚಾಕೂಟ, ಕರಕುಶಲ ವಸ್ತು ತಯಾರಿ, ಕಂಪ್ಯೂಟರ್‌ ಮೂಲಕ ಕಲಿಕೆ, ಪ್ರಯೋಗಶಾಲೆ- ವಾಚನಾಲಯ ಬಳಕೆ, ಪಠ್ಯಸಂಬಂಧಿ ಪಾತ್ರಾಭಿನಯ, ಪದ್ಯ ರಚನೆ, ಆ ಪದ್ಯಕ್ಕೆ ರಾಗ ಸಂಯೋಜಿಸಿ ಹಾಡುವುದು, ಕಿರುನಾಟಕ, ಚಿತ್ರರಚನೆ ಮುಂತಾದ ಚಟುವಟಿಕೆಗಳಿರುತ್ತವೆ.

    ಇದಲ್ಲದೆ ವಿದ್ಯಾರ್ಥಿಗಳಿಗೆ ಅನುಕೂಲವಾದ ಮತ್ತು ಶೈಕ್ಷಣಿಕವಾಗಿ ಉಪಯುಕ್ತವಾಗಿರುವ ಯಾವುದೇ ಸೃಜನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *