LATEST NEWS
ಪೊಲೀಸ್ ಇಲಾಖೆ ನಿರ್ಲಕ್ಷಕ್ಕೆ ಬಲಿಯಾದ ಪರೇಶ್ ಮೆಸ್ತ ?
ಪೊಲೀಸ್ ಇಲಾಖೆ ನಿರ್ಲಕ್ಷಕ್ಕೆ ಬಲಿಯಾದ ಪರೇಶ್ ಮೆಸ್ತ?
ಕಾರವಾರ ಡಿಸೆಂಬರ್ 11: ಹೊನ್ನಾವರದಲ್ಲಿ ನಡೆದ ಪರೇಶ್ ಮೆಸ್ತ ಹತ್ಯೆಪ್ರಕರಣಕ್ಕೆ ಪೊಲೀಸರೇ ನೇರ ಹೊಣೆ ಎಂದು ಆರೋಪಿಸಲಾಗುತ್ತಿದೆ. ಹೊನ್ನಾವರದಲ್ಲಿ ನಡೆದ ಘರ್ಷಣೆ ಸಂದರ್ಭದಲ್ಲಿ ನಾಲ್ಕು ಜನ ಯುವಕರನ್ನು ಬಂಧಿಯಾಗಿಸಿರುವ ಕುರಿತು ಪೊಲೀಸರಿಗೆ ಮಾಹಿತಿ ನಿಡಿದ್ದರೂ ಪೊಲೀಸರು ನಿರ್ಲಕ್ಷವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಂಧಿಯಾಗಿಸಿರುವ ಯುವಕರನ್ನ ಬಿಡುಗಡೆಗೊಳಿಸುವ ಬಗ್ಗೆ ಪ್ರಯತ್ನಿಸುವ ಬದಲು ಪೊಲೀಸರು ಸಂಧಾನ ಪ್ರಕ್ರಿಯೆಯಲ್ಲಿ ತಲ್ಲಿನರಾಗಿದ್ದ ಕಾರಣ ಪರೇಶ್ ಮೇಸ್ತ ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತವಾಗಿದ್ದು, ಇಂದು ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಇಲಾಖೆಯ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಅಲ್ಲದೆ ಪಶ್ಚಿಮವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರ ಕಾರಿಗೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಕುಮಟಾದಲ್ಲಿ ಐಜಿ ಅವರ ಕಾರಿಗೆ ಬೆಂಕಿ ಹಾಕಿದವರಾರು ಎಂಬ ಪ್ರಶ್ನೆ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಠಾಣೆಯ ಪರವೀಕ್ಷಣೆಗೆ ತೆರಳುವಾಗ ಹಿರಿಯ ಪೊಲೀಸ್ ಅಧಿಕಾರಿ ವಾಹನದ ಪೈಲೆಟ್ ಹಾಗೂ ಎಸ್ಕಾರ್ಟ್ ಗಾಡಿಗಳಿರುವುದು ಶಿಷ್ಟಾಚಾರ.
ಆದರೆ ಕುಮಟಾದಲ್ಲಿ ಬಿಗುವಿನ ವಾತಾವರಣವಿದ್ದರೂ ಐಜಿಪಿ ವಾಹನದ ಪೈಲೆಟ್ ಹಾಗೂ ಎಸ್ಕಾರ್ಟ್ ವಾಹನಗಳಿದ್ದರೂ ಯಾಕೆ ಬಳಸಲಾಗಲಿಲ್ಲ ಎಂಬ ಹಲವಾರು ಪ್ರಶ್ನೆಗಳು ಉದ್ಬವಿಸುತ್ತಿವೆ, ಐಜಿ ವಾಹನಕ್ಕೆ ಉದ್ರಿಕ್ತರು ಬೆಂಕಿ ನೀಡುತ್ತಿರುವ ಸಂದರ್ಭದಲ್ಲಿ ಐಜಿಪಿ ಅಂಗರಕ್ಷಕ ಹಾಗೂ ವಾಹನ ಚಾಲಕ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ ಮೂಡುತ್ತಿವೆ.