LATEST NEWS
ಪೋಲಿಸರ ಕ್ರಮದ ವಿರುದ್ದ ದೇವರ ಮೊರೆ ಹೋದ ಹಿಂದೂ ಕಾರ್ಯಕರ್ತರು
ಪುತ್ತೂರು,ಆಗಸ್ಟ್ 13 : ಪೋಲೀಸರ ಕ್ರಮದ ವಿರುದ್ಧ ದೇವರ ಮೊರೆ ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.ಆಗಸ್ಟ್ 12 ರಂದು ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ ಸುಳ್ಯಪದವು ಎಂಬಲ್ಲಿ ಕಸಾಯಿ ಕಾಣೆಗೆ ಸಾಗಿಸುತ್ತಿದ್ದ 4 ದನ ಹಾಗು ಕರುಗಳನ್ನು ರಕ್ಷಿಸಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರನ್ನು ಸ್ಥಳೀಯ ಪೋಲಿಸರು ಬಂಧಿಸಿ ಅವರ ಮೇಲೆ ಸೆಕ್ಷನ್ 307 ರ ಆರೋಪ ಹೊರಿಸಿದ್ದರು. ಪುತ್ತೂರು ಗ್ರಾಮಂತರ ಠಾಣೆಯಾದ ಸಂಪ್ಯ ಪೋಲೀಸರ ಈ ಕ್ರಮದ ವಿರುದ್ಧ ಪುತ್ತೂರು ಮಹಾಲಿಂಗೇಶ್ವರ ದೇವರ ಮೊರೆ ಹೋದ ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಾರೆ.
ಹಿಂದೂ ಪರ ಸಂಘಟನಾ ಮುಖಂಡ ಅರುಣ್ ಪುತ್ತಿಲ ಅವರ ನೇತ್ರತ್ವದಲ್ಲಿ ಮಹಾಲಿಂಗೇಶ್ವರ ದೇವರ ಮುಂದೆ ತಮ್ಮ ಅಹವಾಲನ್ನು ಮಂಡಿಸಿದ ಕಾರ್ಯಕರ್ತರು ಪೋಲಿಸರು ರಾಡ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ಸುಳ್ಳು ಕೇಸು ಹಾಕಿದ್ದಾರೆ. ಪೋಲೀಸರು ಅದು ಹೌದಾದಲ್ಲಿ ದೇವರ ಮುಂದೆ ಒಪ್ಪಿಕೊಳ್ಳಲಿ.
“section 307 ಅಂದರೆ ಮಾರಣಾಂತಿಕ ಹಲ್ಲೆ” ಎಂಬುದಾಗಿ ಪೋಲಿಸರು ಕೇಸು ದಾಖಲಿಸಿದ್ದಾರೆ ಆದರೆ ದನ ಕಳ್ಳರು ಜಾಮೀನು ಪಡೆದು ಅದೇ ದಿನ ಮನೆಗೆ ಹೇಗೆ ಹೋದರು ? ಮಾರಣಾಂತಿಕ ಹಲ್ಲೆ ಆಗಿದ್ದರೆ ಆಸ್ಪತ್ರೆಯಲ್ಲಿ ಇರಬೇಕಿತ್ತು ಅಲ್ಲವೇ?. ಹಿಂದುಗಳ ಮೇಲೆ ಸುಳ್ಳು ಕೇಸ್ ಹಾಕುವ ಈ ಸಂಪ್ಯ ಪೋಲೀಸರನ್ನು ನಾವು ನಂಬಿದ ಆ ಪುತ್ತೂರ ಒಡೆಯ ಮಹಾಲಿಂಗೇಶ್ವರನೇ ನೋಡಿಕೊಳ್ಳಲಿ ಎಂದು ಅಹವಾಲನ್ನು ದೇವರ ಮುಂದೆ ಮಂಡಿಸಿದರು.