DAKSHINA KANNADA
ಪುತ್ತೂರು ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆಗೆ ತಡೆ ಎನ್ನುವ ಸುಳ್ಳು ಸುದ್ಧಿ ಹರಡಿದವರು ದಾಖಲೆ ಬಹಿರಂಗಪಡಿಸಲಿ- ಅಧ್ಯಕ್ಷ ಐ.ಬಿ.ಸಂದೀಪ್ ಸವಾಲ್
ಪುತ್ತೂರು : ಪುತ್ತೂರು ತಾಲೂಕು ಪತ್ರಕರ್ತರ ಸಂಘ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸಿಕೊಂಡು ಬಂದಿರುವ ಸ್ವತಂತ್ರ ಪತ್ರಕರ್ತರ ಸಂಘಟನೆಯಾಗಿದ್ದು, ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಸಂಘದ ಮಾಜಿ ಅಧ್ಯಕ್ಷ, ಪ್ರಸ್ತುತ ಮಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಶ್ರವಣಕುಮಾರ್ ನಾಳ ಸುಳ್ಳು ಸುದ್ದಿಗಳನ್ನು ಹರಡುತ್ತಾ, ತಾನೇ ಅಧ್ಯಕ್ಷ ಎಂದು ಬಿಂಬಿಸುತ್ತಿರುವುದು ನಾಚಿಗೆಗೇಡಿನ ವಿಚಾರವಾಗಿದೆ ಎಂದು ಸಂಘದ ಅಧ್ಯಕ್ಷ ಐ.ಬಿ.ಸಂದೀಪ್‍ಕುಮಾರ್ ಟೀಕಿಸಿದ್ದಾರೆ.
ಪುತ್ತೂರು ತಾಲೂಕು ಪತ್ರಕರ್ತರ ಸಂಘ ಸಹಕಾರಿ ಇಲಾಖೆಯ ಅಡಿಯಲ್ಲಿ ನೊಂದಣಿಯಾದ ಸಂಘವಾಗಿದೆ.ಯಾವುದೇ ಇತರ ಪತ್ರಿಕಾ ಸಂಘಟನೆಯ ವ್ಯಾಪ್ತಿಯಲ್ಲಿಲ್ಲ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಮಿಕ ಇಲಾಖೆಯ ಅಡಿಯಲ್ಲಿ ನೋಂದಣಿಯಾದ ಸಂಘವಾಗಿದೆ. ಆದರೆ ಶ್ರವಣಕುಮಾರ್ ನಾಳ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ತಡೆ ನೀಡಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದು,ಪ್ರಜ್ಞಾವಂತ ಜನತೆ ಇದು ಹೇಗೆ ಸಾಧ್ಯ ಎಂಬುವುದನ್ನು ಪ್ರಶ್ನಿಸಬೇಕಾಗಿದೆ.
ಪುತ್ತೂರು ತಾಲೂಕು ಪತ್ರಕರ್ತರ ಸಂಘದದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದ ಎಲ್ಲಾ ಪತ್ರಿಕೆಗಳ ಮತ್ತು ಮಾಧ್ಯಮಗಳ ವರದಿಗಾರರು ಸದಸ್ಯರಾಗಿದ್ದಾರೆ. ಈ ಸಂಘದಲ್ಲಿ ಸದಸ್ಯರಾಗಿದ್ದುಕೊಂಡು ಪುತ್ತೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಹೇಗೆ ಎಂಬುವುದು ಗೊತ್ತಿದೆ. ಕಳೆದ ಸುಮಾರು ನಾಲ್ಕೈದು ವರ್ಷಗಳಲ್ಲಿ ಶ್ರವಣ್‍ಕುಮಾರ್ ನಾಳ ಏನೆಲ್ಲಾ ಮಾಡಿದ್ದಾರೆ, ಎಲ್ಲಿ ಕೆಲಸ ಮಾಡಿದ್ದಾರೆ. ಯಾವ ಸಭೆ ಸಮಾರಂಭಗಳಿಗೆ ಭಾಗಿಯಾಗಿದ್ದಾರೆ ಎಂಬುವುದು ಪುತ್ತೂರಿನ ಜನತಗೆ ತಿಳಿದಿದೆ. ಹೆಚ್ಚಿನ ಮಂದಿಗೆ ಯಾರೆಂದೇ ಗೊತ್ತಿಲ್ಲ.
ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗೆ ತಡೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಹರಡುವ ಮೂಲಕ ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಮೇಲೆಯೇ ಅವಿಶ್ವಾಸ ಭರಿಸುವ ಕೆಲಸವನ್ನು ಶ್ರವಣ್‍ಕುಮಾರ್ ನಾಳ ಮಾಡಿದ್ದು, ತಾನು ಹರಡಿರುವ ಸುಳ್ಳು ಸುದ್ದಿ ಬಗ್ಗೆ, ತಡೆಯ ಕುರಿತು ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ರಾಜ್ಯಾಧ್ಯಕ್ಷರು ರವಾನಿಸಿರುವ ದಾಖಲೆಯನ್ನು ಬಹಿರಂಗ ಪಡಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.