PUTTUR
ಪಿಎಫ್ಐ ಕಾರ್ಯಕರ್ತರೊಂದಿಗೆ ಕಿರಿಕ್, ಬಾಲ ಮುದುಡಿ ಕುಳಿತ ಪುತ್ತೂರು ನಗರ ಪೋಲೀಸ್
ಪುತ್ತೂರು, ಆಗಸ್ಟ್ 26 : ಪೋಲೀಸ್ ಜೊತೆ ಸಾಮಾನ್ಯ ವ್ಯಕ್ತಿ ವ್ಯವಹರಿಸುವಾಗ ಕೊಂಚ ಹದ್ದುಬಸ್ತಿನಲ್ಲಿರೋದು ಉತ್ತಮ ಎನ್ನೋ ಮಾತು ಎಲ್ಲರಿಗೂ ತಿಳಿದ ವಿಚಾರವವೇ ಆಗಿದೆ. ಯಾಕಂದ್ರೆ ತನ್ನ ತಪ್ಪಿದ್ದರೂ, ಇಲ್ಲದಿದ್ದರೂ, ಪೋಲೀಸರು ಹೇಳೋದನ್ನು ಕೇಳಲೇ ಬೇಕು.ಕೇಳದೇ ಹೋದಲ್ಲಿ ಪೋಲೀಸ್ ಬಾಯಿಂದ,ಕೈಯಿಂದ ಬರುವ ಮಾತು ಮತ್ತು ಕೃತಿಗೆ ಆತನೇ ಹೊಣೆಯಾಗುತ್ತಾನೆ. ಆದರೆ ನಿನ್ನೆ ಶುಕ್ರವಾರ ಅಗಸ್ಟ್ 25 ರಂದು ಪುತ್ತೂರಿನ ಬಸ್ ನಿಲ್ದಾಣದಲ್ಲಿ ನಡೆದದ್ದೇ ಬೇರೆ. ಫುಟ್ ಬಾತ್ ನಲ್ಲಿ ಗಂಟೆ ಗಟ್ಟಲೆ ಕೂತು ಎನೋ ಲೆಕ್ಕಾಚಾರದಲ್ಲಿ ತೊಡಗಿದ್ದ ಪಿಎಫ್ಐ ಕಾರ್ಯಕರ್ತನನ್ನು ಪೋಲೀಸ್ ಪೇದೆಯೊಬ್ಬರು ತನ್ನದೇ ಆದ ಶೈಲಿಯಲ್ಲಿ ವಿಚಾರಿಸಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಆತ ಪೋಲೀಸ್ ಪೇದೆಯೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಇದೇ ಸಂದರ್ಭದಲ್ಲಿ ಆತನ ನಾಲ್ವರು ಸ್ನೇಹಿತರೂ ಸೇರಿ ಪೋಲೀಸ್ ಪೇದೆಯ ಬೆವರಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪೋಲೀಸ್ ಪೇದೆ ತನ್ನೊಂದಿಗೆ ವಾಗ್ವಾದ ನಡೆಸಿದ ಯುವಕನನ್ನು ಆಟೋದಲ್ಲಿ ಕೂರಿಸಿ ಸಮೀಪದಲ್ಲೇ ಇರುವ ಪುತ್ತೂರು ನಗರ ಪೋಲೀಸ್ ಠಾಣೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆತ ಹಾಗೂ ಆತನ ಸ್ನೇಹಿತರು ಪೋಲೀಸ್ ಪೇದೆಯನ್ನು ಬಲವಂತವಾಗಿ ತಳ್ಳಿ ಸ್ಥಳದಿಂದ ಪರಾರಿಯಾಗಿ ಪ್ರಾರ್ಥನಾ ಮಂದಿರವೊಂದಕ್ಕೆ ನುಗ್ಗಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ. ಪೋಲೀಸರೊಂದಿಗೆ ಈ ರೀತಿಯಾಗಿ ವರ್ತಿಸಿದ ಈ ಯುವಕರು ಯಾರು ಎನ್ನುವುದನ್ನು ತನಿಖೆ ನಡೆಸುವ ಗೋಚಿಗೂ ಹೋಗದೆ ಪೆಚ್ಚು ಮೋರೆ ಹಾಕಿ ಕುಳಿತಿದ್ದಾರೆ. ಸರಕಾರಿ ಬಸ್ ನಿಲ್ದಾಣದ ಬಳಿ ಇಷ್ಟೊಂದು ರಾದ್ದಾಂತವಾದರೂ ಪುತ್ತೂರು ನಗರ ಪೋಲೀಸರು ಮಾತ್ರ ಆ ಯುವಕರು ಯಾರು ಎನ್ನುವುದನ್ನು ವಿಚಾರಿಸದೆ ಬಿಟ್ಟಿರುವುದು ಸಾರ್ವಜನಿಕರ ಸಂಶಯಕ್ಕೂ ಎಡೆಮಾಡಿಕೊಟ್ಟಿದೆ. ಸಣ್ಣ ಪುಟ್ಟ ಕೇಸಿಗೂ ತನಗಾಗದವರ ಮನೆಗೆ ರಾತ್ರಿ ವೇಳೆಗೆ ನುಗ್ಗಿ ತನ್ನ ಕರ್ತವ್ಯ ನಿಷ್ಟೆ ಮೆರೆದೆವು ಎಂದು ಅಂದುಕೊಳ್ಳುತ್ತಿದ್ದ ಪೋಲೀಸರು ಈ ಪ್ರಕರಣದಲ್ಲಿ ಮಾತ್ರ ಯಾಕೆ ಸುಮ್ಮನಾದರು ಎನ್ನುವ ವಿಚಾರವಾಗಿ ಇದೀಗ ಪುತ್ತೂರಿನಾದ್ಯಂತ ಗುಸುಗುಸು ಕೇಳಿಬರುತ್ತಿದೆ. ಪುತ್ತೂರು ನಗರ ಪೋಲೀಸ್ ಅಧಿಕಾರಿಗಳು ತನ್ನ ಜೊತೆಗಿದ್ದಾರೆ ಎನ್ನುವ ಧೈರ್ಯದಿಂದ ಕರ್ತವ್ಯ ಮೆರೆದ ಪೋಲೀಸ್ ಪೇದೆ ಮಾತ್ರ ಇನ್ನು ಮುಂದೆ ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ಮಾತಿನಂತೆ ನಡೆಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.